ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ನಿರ್ಮೂಲನೆಗೆ ಪಣ : ಎಸ್ಪಿ.ಕೆ.ಅಣ್ಣಾಮಲೈ

ಈ ಸುದ್ದಿಯನ್ನು ಶೇರ್ ಮಾಡಿ

k-annamalai

ಚಿಕ್ಕಮಗಳೂರು,ಫೆ.15-ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆ ಪಣ ತೊಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ವ್ಯಾಪಕವಾಗಿದೆ ಎಂಬ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದೆ. ಈ ಸಂಬಂಧ ತನಿಖಾ ತಂಡ ರಚನೆ ಮಾಡಲಾಗಿದೆ. ಆದರೆ ತನಿಖಾ ತಂಡದ ಮೇಲೆ ಶಾಸಕ ಸಿ.ಟಿ.ರವಿ ಅವರ ಆರೋಪದ ಹಿನ್ನೆಲೆಯಲ್ಲಿ ಈ ತನಿಖಾ ತಂಡವನ್ನೇ ಬೇರೆ ರೀತಿ ಸಮಗ್ರವಾಗಿ ರಚಿಸಲಾಗುವುದು. ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಪ್ರಮುಖ ಸೂತ್ರಧಾರರು ಯಾರೆಂಬುದನ್ನು ಪತ್ತೆ ಮಾಡಲಾಗುವುದು ಎಂದರು.

ತನಿಖಾ ವರದಿ:

ನಗರದಲ್ಲಿ ಈ ಹಿಂದೆ ಮಣಪ್ಪುರಂ ಗೋಲ್ಡ್ ಸಂಸ್ಥೆಯಲ್ಲಿ ನಡೆದಿದ್ದ ಕಳವು ಪ್ರಕರಣದ ತನಿಖೆ ನಡೆದಿದೆ. ಈಗಾಗಲೇ ಶೇ.75ರಷ್ಟು ಹಣ, ಆಭರಣ ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಪೂರ್ಣ ತನಿಖಾ ವರದಿ ಲಭ್ಯವಾಗಲಿದೆ ಎಂದು ತಿಳಿಸಿದರು.  ಭರವಸೆ: ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ನಾಲ್ಕು ಲಕ್ಷ ರೂ. ಅನುದಾನವನ್ನು ನಗರಸಭಾ ಅಧ್ಯಕ್ಷರು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.ನಗರದಲ್ಲಿನ ಕೆಲ ರಸ್ತೆಗಳು ಕಳಪೆ ಗುಣಮಟ್ಟದಲ್ಲಿದ್ದು , ರಸ್ತೆಗಳಲ್ಲಿನ ಕೆಲವು ಉಬ್ಬುಗಳು ಅವೈಜ್ಞಾನಿಕವಾಗಿದೆ. ಜೀಬ್ರಾ ಲೈನ್, ರಸ್ತೆ ಉಬ್ಬುಗಳನ್ನು ಉತ್ತಮವಾಗಿ ಅಳವಡಿಸಲು ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin