ಕ್ರಿಕೆಟ್ ಬೆಟ್ಟಿಂಗ್ : ನಾಲ್ವರು ಆರೋಪಿಗಳ ಬಂಧನ 7,35,740ರೂ. ವಶ
ಚಿಕ್ಕಮಗಳೂರು, ಮೇ 2- ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಮೂಡಿಗೆರೆ ಠಾಣೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, 7,35,740 ರೂ. ನಗದು, ಮೂರು ಮೊಬೈಲ್, 1 ಟಿವಿ, ಡಿವಿಆರ್ ರಿಮೋಟ್, ನಾಲ್ಕು ಬ್ಯಾಂಕ್ ಪಾಸ್ಬುಕ್ಗಳನ್ನು ವಶಪಡಿಸಿಕೊಂಡಿದ್ದಾರೆ.ಪಟ್ಟಣದ ದಲ್ಲಾರಾಮ್ (34), ಬಾಬುಲಾಲ್, (30) ಕನ್ನಳ್ಳಿ ಗ್ರಾಮದ ಸೀತಾನ್ (27) ಮತ್ತು ಓರ್ವ ಅಪ್ರಾಪ್ತ ಬಾಲಕ ಬಂಧಿತರು.ಜಿಲ್ಲೆಯ ಮೂಡಿಗೆರೆ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಸತೀಶ್ ಪಟೇಲ್ ಎಂಬುವರ ರಾಮ್ದೇವ್ ಗಾರ್ಮೆಂಟ್ಸ್ ಅಂಡ್ ಸ್ಯಾರಿ ಸೆಂಟರ್ ಬಟ್ಟೆ ಅಂಗಡಿಯಲ್ಲಿ ಆರೋಪಿಗಳು ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದರು.
ಈ ಬಗ್ಗೆ ಸ್ಥಳೀಯರು ಮೂಡಿಗೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧರಿಸಿದ ಪಿಎಸ್ಐ ರಫೀಕ್ ನೇತೃತ್ವದ ತಂಡ ದಾಳಿ ಮಾಡಿತ್ತು. ದಾಳಿ ವೇಳೆ ಐವರು ಆರೋಪಿಗಳಲ್ಲಿ ಮೂವರು ಓಡಿ ಹೋಗಿದ್ದಾರೆ. ಉಳಿದ ಇಬ್ಬರನ್ನು ವಿಚಾರಿಸಿದಾಗ 40 ಸಾವಿರ ರೂ. ಬೆಟ್ಟಿಂಗ್ ಕಟ್ಟಿ ಜೂಜಾಟವಾಡುತ್ತಿದ್ದುದಾಗಿ ತಿಳಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಅಂಗಡಿ ಕಟ್ಟಡದ ಮೇಲ್ಭಾಗದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ.ನಂತರ ಎಚ್ಚೆತ್ತುಕೊಂಡ ಪೊಲೀಸರು ಮೇಲ್ಭಾಗದಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ಬೆಟ್ಟಿಂಗ್ಗೆ ಇಟ್ಟಿದ್ದ 7,35,740ರೂ. ನಗದು, ಟಿವಿ, ಪಾಸ್ಬುಕ್ಗಳನ್ನು ಜಫ್ತಿ ಮಾಡಿದ್ದಾರೆ.ಪಿಎಸ್ಐ ರಫೀಕ್, ಸಿಬ್ಬಂದಿಗಳಾದ ಅಶೋಕ್, ತಿಮ್ಮಪ್ಪ, ದಯಾನಂದ್, ಉಮೇಶ್, ಶಿವಕುಮಾರ್, ಸುಜಾತ, ರವೀಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS