ಕ್ರಿಶ್-4ರಲ್ಲಿ ಹೃತಿಕ್ ಜೊತೆಯಾಗಲಿದ್ದಾಳೆ ಪಿಗ್ಗಿ

ಈ ಸುದ್ದಿಯನ್ನು ಶೇರ್ ಮಾಡಿ

Krissh

ಬಾಲಿವುಡ್‍ನಲ್ಲಿ ಈಗ ಎಲ್ಲೆಲ್ಲೂ  ಪಿಗ್ಗಿಯದೇ ಮಾತು. ಸುದ್ದಿಯ ಕಣಜದಂತಿರುವ ಪಿಸಿ ಬಗ್ಗೆ ಮತ್ತೆ ಹೊಸ ಸಮಾಚಾರವೊಂದು ಬಿ-ಟೌನ್‍ನಿಂದ ಬಂದಿದೆ.  ಬಾಲಿವುಡ್ ಮೋಹಕ ನಟ ಹೃತಿಕ್ ರೋಷನ್ ಜೊತೆ ಪಿಂಕಿ ಮತ್ತೆ ನಟಿಸುತ್ತಾಳೆ ಎಂಬ ಸಂಗತಿ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡಿದೆ. ಕ್ರಿಶ್-4ರಲ್ಲಿ ಹೃತಿಕ್ ಮತ್ತು ಪ್ರಿಯಾಂಕ ಒಟ್ಟಿಗೆ ನಟಿಸಲಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್.  ಕಿಸ್ಮತ್ ಟಾಕೀಸ್, ಅಗ್ನಿಪಥ್, ಡಾನ್ ಮತ್ತು ಕ್ರಿಶ್- ಸಿನಿಮಾಗಳಲ್ಲಿ ಈ ಗ್ಲಾಮರ್ ಜೋಡಿಯನ್ನು ಜನ ಕಣ್ತುಂಬಿಕೊಂಡಿದ್ದರು. ಹೃತಿಕ್ ಈಗ ಆ್ಯಕ್ಷನ್ ಥ್ರಿಲ್ಲರ್ ಕಾಬಿಲ್ ಸಿನಿಮಾದ ಪ್ರಮೋಷನ್‍ನಲ್ಲಿ ಬ್ಯುಸಿ. ಅತ್ತ ಪಿಗ್ಗಿ ಅಮೆರಿಕದಲ್ಲಿ ಕ್ವಾಂಟಿಕೋ ಟೆಲಿವಿಷನ್ ಸೀರಿಯಲ್ ಶೂಟಿಂಗ್‍ನಲ್ಲಿದ್ದಾಳೆ. ಇನ್ನೊಂದೆಡೆ ಬೇವಾಚ್ ಹಾಲಿವುಡ್ ಸಿನಿಮಾಗೂ ಸಹಿ ಮಾಡಿದ್ದಾಳೆ. ಬಿಡುವಿಲ್ಲದ ಇವರಿಬ್ಬರು ಕಾಲ್‍ಶೀಟ್ ನೋಡಿಕೊಂಡು ಕ್ರಿಶ್-4 ಸೆಟ್ಟೇರಲಿದೆಯಂತೆ. ಆದಾಗ್ಯೂ ಈ ಹೊಸ ಪ್ರಾಜೆಕ್ಟ್‍ನಲ್ಲಿ ಪಿಸಿ ನಟಿಸುವ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿ ರಸಿಕರಲ್ಲಿ ಈ ಜೋಡಿ ಮಾಡಲಿದೆ ಮೋಡಿ.

► Follow us on –  Facebook / Twitter  / Google+

Facebook Comments

Sri Raghav

Admin