ಕ್ರಿಶ್-4 ಗೆ ರಾಕೇಶ್ ರೋಷನ್ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Krrish-4

ಬಾಲಿವುಡ್ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಾಕೇಶ್ ರೋಷನ್ ಕ್ರಿಶ್ -4 ಸಿನಿಮಾದ ಗುಂಗಿನಲ್ಲಿದ್ದಾರೆ. ಈಗಾಗಲೇ ಈ ಹೊಸ ಪ್ರಾಜೆಕ್ಟ್‍ನಲ್ಲಿ ಬ್ಯುಸಿಯಾಗಿರುವ ಆರ್‍ಆರ್ ಹೇಳುವಂತೆ ಇದು ಹೈವೋಲ್ಟೇಜ್ ಸಿನಿಮಾ. ಹೆವಿ ಡೋಸ್ ಆಕ್ಷನ್ ಸೀಕ್ವೆನ್ಸ್ ಗಳು ಮತ್ತು ವಿಎಫ್‍ಎಕ್ಸ್ ಎಫೆಕ್ಟ್ ಗಳು ಇದರಲ್ಲಿರುತ್ತವೆ. ಸೂಪರ್‍ಹಿಟ್ ಸೂಪರ್ ಹೀರೋ ಕ್ರಿಶ್ ನ ಮುಂದಿನ ಸರಣಿಗಾಗಿ ಒಂದು ಅಚ್ಚುಕಟ್ಟಾದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿರುವ ರಾಕೇಶ್ ಅದಕ್ಕಾಗಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ಧಾರೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಶೂಟಿಂಗ್ ಶುರುವಾಗಲಿದೆ.

2018ರ ವೇಳೆಗೆ ಹೃತಿಕ್ ರೋಷನ್‍ ಕ್ರಿಶ್ ತೆರೆ ಮೇಲೆ ಮಿಂಚಲಿದ್ದಾನೆ. ಇದೊಂದು ದೊಡ್ಡ ಪ್ರಾಜೆಕ್ಟ್ ನಾವು ಇದಕ್ಕಾಗಿ ಅತ್ಯಾಧುನಿಕ ವಿಎಫ್‍ಎಕ್ಸ್ ತಂತ್ರಜ್ಞಾನ ವನ್ನು ಬಳಸಿಕೊಳ್ಳಬೇಕಿದೆ. ಇದಕ್ಕೆ ನಿರೀಕ್ಷೆಗೂ ಮೀರಿದ ಬಜೆಟ್ ಬೇಕು ಎಂದು ರೋಷನ್ ಸಿನಿ ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಅಕ್ಷನ್ ಸಿಕ್ವೆನ್ಸ್‍ಗಾಗಿ ನಾವು ಅಂತಾರಾಷ್ಟ್ರೀಯ ಖ್ಯಾತಿಯ ಸಾಹಸ ನಿರ್ದೇಶಕರ ನೆರವು ಪಡೆಯಬೇಕಿದೆ ಎಂದು ರಾಕೇಶ್ ಹೇಳುತ್ತಾರೆ.ಕ್ರಿಶ್ ಹಿಂದಿನ ಸರಣಿಯಲ್ಲಿ ಸಿಕ್ಸ್‍ಪ್ಯಾಕ್ ನಟ ಹೃತಿಕ್ ರೋಷನ್ ಮಿಂಚಿದ್ದು, ಹೊಸ ಪ್ರಾಜೆಕ್ಟ್‍ನಲ್ಲಿ ನಟಿಸುವ ತಾರೆಯರ ಹೆಸರು ಇನ್ನೂ ಫೈನಲ್ ಆಗಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin