ಕ್ರಿಸ್‍ಮಸ್ ಮಾರುಕಟ್ಟೆಗೆ ನುಗ್ಗಿದ ಟ್ರಕ್ : 12ಕ್ಕೂ ಹೆಚ್ಚು ಜನರ ಸಾವು, ಭಯೋತ್ಪಾದನೆ ದಾಳಿ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Truk-01

ಬರ್ಲಿನ್, ಡಿ.20- ಕ್ರಿಸ್‍ಮಸ್ ಮಾರುಕಟ್ಟೆಗೆ ನುಗ್ಗಿದ ಟ್ರಕ್ಕೊಂದು 12 ಜನರನ್ನು ಬಲಿ ತೆಗೆದುಕೊಂಡ ಘಟನೆ ಜರ್ಮನಿ ರಾಜಧಾನಿ ಬರ್ಲಿನ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದು, ಇದು ಶಂಕಿತ ಭಯೋತ್ಪಾದನೆ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ.  ಪ್ರವಾಸಿಗಳಿಂದ ಕಿಕ್ಕಿರಿದಿದ್ದ ಚೌಕವೊಂದರ ಮಾರುಕಟ್ಟೆಗೆ ವೇಗವಾಗಿ ಟ್ರಕ್ ನುಗ್ಗಿ ಬಂದಿತು. ಕ್ರಿಸ್ಮಸ್‍ಗಾಗಿ ವಸ್ತುಗಳ ಖರೀದಿ ಸಂಭ್ರಮದಲ್ಲಿದ್ದ ಜನರ ಮೇಲೆ ಟ್ರಕ್ ಹರಿಯಿತು. ಕೆಲವೇ ಕ್ಷಣಗಳಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

500
ಈ ದುರ್ಘಟನೆಯಲ್ಲಿ ಗಾಯಗೊಂಡಿರುವ 50 ಜನರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂಬ್ಯುಲೆನ್ಸ್ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ.  ಈ ದುರಂತ ನಡೆದ ನಂತರ ಪೊಲೀಸರು ಮತ್ತು ಅಂಬ್ಯುಲೆನ್ಸ್‍ಗಳ ಸ್ಥಳಕ್ಕೆ ಧಾವಿಸಿದವು. ಈ ಘಟನೆ ನಂತರ ಇಡೀ ಪ್ರದೇಶ ಆತಂಕ-ಗೊಂದಲಕ್ಕೆ ಒಳಗಾಯಿತು. ಫ್ರಾನ್ಸ್‍ನ ನೈಸ್ ರೆವೀರಾ ನಗರದಲ್ಲಿ ಜುಲೈನಲ್ಲಿ ಇದೇ ರೀತಿ ವೇಗವಾಗಿ ಟ್ರಕ್ ನುಗ್ಗಿಸಿ ನಡೆದ ದಾಳಿಯಲ್ಲಿ ಅನೇಕರು ಮೃತಪಟ್ಟಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

accident1

BN-RH360_rustur_P_20161219172941

BN-RH283_gertru_P_20161219160706

truck3_122016093600

Facebook Comments

Sri Raghav

Admin