ಕ್ರೀಡಾಗ್ರಾಮದಲ್ಲಿ ಲಿಯಾಂಡರ್ ಪೇಸ್‍ಗೆ ರೂಮ್ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

agfasdg'ರಿಯೊ ಡಿ ಜೆನೈಯೋ,  ಆ.5– ಭಾರತದ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್‍ಗೆ ಕ್ರೀಡಾ ಗ್ರಾಮ ದಲ್ಲಿ  ರೂಮ್ ದೊರೆದಿರು ವುದರಿಂದ ಪೇಸ್ ನಿರಾಸೆ ಅನುಭವಿಸಿದ್ದಾರೆ.   ರಿಯೊ ಒಲಿಂಪಿಕ್ಸ್ ನಲ್ಲಿ  ಭಾರತ  ದೇಶವನ್ನು ಪ್ರತಿನಿಧಿಸಲು ನಿನ್ನೆ ಇಲ್ಲಿಗೆ ಆಗಮಿಸಿದ 6 ಬಾರಿ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಂಡಿರುವ ಲಿಯಾಂಡರ್ ಪೇಸ್‍ಗೆ  ಈ ಮುನ್ನ  ತಮ್ಮ ಜತೆಗಾರ  ರೋಹನ್ ಬೋಪಣ್ಣರೊಂದಿಗೆ ಕೋಣೆಯನ್ನು ಶೇರ್ ಮಾಡಿಕೊಳ್ಳಲು ತಿಳಿಸಿತ್ತು. ಆದರೆ ಲಿಯಾಂಡರ್ ಪೇಸ್ ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ   ಬೋಪಣ್ಣರ ಕೋಣೆಯಲ್ಲಿ  ಮತ್ತೊಬ್ಬ ಆಟಗಾರ ಸಕೈತ್ ಮೈನಾನಿಯವರು ಜಾಗ ಪಡೆದಿದ್ದಾರೆ.

ಇದರಿಂದ  ನಿನ್ನೆ   ರಿಯೊ ಡಿ ಜೆನೈರಿ ಯೋಗೆ  ಆಗಮಿಸಿದಾಗ ಅವರಿಗೆ ಯಾವುದೇ ರೂಮ್ ಅನ್ನು ನಿಗದಿಪಡಿಸ ದಿರುವುದರಿಂದ  ಅವರಿಗೆ ತೀವ್ರ ಬೇಸರ ಉಂಟಾಗಿದೆ.  ಈಗ ಪೇಸ್‍ಗೆ ನ್ಯೂಯಾರ್ಕ್‍ನಲ್ಲಿ ರೂಮ್ ನಿಗದಿಪಡಿಸಿದ್ದು ಅಲ್ಲಿಂದ ಕ್ರೀಡಾ ಗ್ರಾಮಕ್ಕೆ ಆಗಮಿಸಲು  ತೀವ್ರ ತೊಂದರೆ ಉಂಟಾಗಿದೆ.

Facebook Comments

Sri Raghav

Admin