ಕ್ರೀಡಾಭಿಮಾನ ಬೆಳೆಸಿಕೊಳ್ಳಲು ಜಿಪಂ ಅಧ್ಯಕ್ಷೆ ಗೀತಾ ಆನಂದರೆಡ್ಡಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

kolar-geetha-Zp
ಕೋಲಾರ, ಆ.24- ಉತ್ತಮ ಆರೋಗ್ಯ ಹಾಗೂ ಸಮಗ್ರ ಕಲಿಕೆಯ ಭಾಗವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ, ಕ್ರೀಡಾಭಿಮಾನ ಬೆಳೆಸಿಕೊಳ್ಳಿ ಎಂದು ಜಿಪಂ ಅಧ್ಯಕ್ಷೆ ಗೀತಾ ಆನಂದರೆಡ್ಡಿ ಕರೆ ನೀಡಿದರು.        ಜಿಲ್ಲಾಡಳಿತ,ಜಿಪಂ,ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆರಂಭವಾದ ತಾಲ್ಲೂಕು ಮಟ್ಟದ ಪ್ರಾಥಮಿಕ,ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.  ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿ.ವೆಂಕಟ ಮುನಿಯಪ್ಪಮಾತನಾಡಿ, ಒಲಂಪಿಕ್ಸ್‌ನಲ್ಲಿ ಭಾರತದ ಇಬ್ಬರು ಹೆಣ್ಣು ಮಕ್ಕಳು ಮಾಡಿದ ಸಾಧನೆ ಇಡೀ ವಿದ್ಯಾರ್ಥಿ,ಯುವ ಸಮುದಾಯಕ್ಕೆ ಆದರ್ಶವಾಗಿದೆ ಎಂದರು.

ಪೋಷಕರು ತಮ್ಮ ಮಕ್ಕಳು ರ್ಯಾಂ ಕ್ ಗಳಿಸಬೇಕು ಬಯಸುತ್ತಾರೆ, ಕ್ರೀಡೆಗಳೆಂದರೆ ಮಕ್ಕಳಿಗೆ ಬೆಂಬಲ ನೀಡುವುದಿಲ್ಲ ಎಂದು ವಿಷಾದಿಸಿದ ಅವರು, ಕ್ರೀಡೆಗಳಿಂದಲೂ ಸಾಧನೆ ಮಾಡಬಹುದು ಎಂಬುದಕ್ಕೆ ಒಲಂಪಿಕ್ಸ್ ಪದಕ ವಿಜೇತರೇ ಸಾಕ್ಷಿಯೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಉಪಾಧ್ಯಕ್ಷೆ ಸಾಕಮ್ಮ ಕ್ರೀಡಾಪಟುಗಳಿಗೆ ಶುಭ ಕೋರಿ, ಸೋಲು,ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದರು.  ಇದೇ ಸಂದರ್ಭದಲ್ಲಿ ಈ ತಿಂಗಳು ನಿವೃತ್ತಿಯಾಗಲಿರುವ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್‌ರನ್ನು ಜಿಪಂ ಅಧ್ಯಕ್ಷರು,ಗಣ್ಯರು ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin