ಕ್ರೀಡಾ ಕ್ಷೇತ್ರ ಮಾಹಿತಿ ನಿಖರತೆಗೆ ಬಂತು ಮೈಕ್ರೋಸಾಫ್ಟ್ ಹೊಸ ಸಾಧನ

ಈ ಸುದ್ದಿಯನ್ನು ಶೇರ್ ಮಾಡಿ

cricket

ಬೆಂಗಳೂರು, ಆ.10– ಕ್ರೀಡಾ ಕ್ಷೇತ್ರದಲ್ಲಿ ನೆರವಾಗಲು ಮೈಕ್ರೋಸಾಫ್ಟ್ ಕಂಪೆನಿ ಈಗ ಡಾಟಾ ಅನಾಲಿಸ್ಟ್ ಮತ್ತು ಮೆಷಿನ್ ಲರ್ನಿಂಗ್ ಎಂಬ ಸಾಫ್ಟ್‍ವೇರ್ ಅನ್ನು ಅಭಿವೃದ್ಧಿ ಪಡಿಸಿದೆ.   ಇದು ಮುಂದಿನ ದಿನ ಗಳಲ್ಲಿ ಅಂಕಿ-ಅಂಶಗಳನ್ನು ಹಿಡಿದಿಟ್ಟುಕೊಳ್ಳುವ ಕ್ಷಣ ಮಾತ್ರದಲ್ಲಿ ಅದನ್ನು ಪಡೆಯಬಹುದಾದ ತಂತ್ರಜ್ಞಾನಕ್ಕೆ ಬೆಂಗಳೂರಿನಲ್ಲಿ ಭಾರತ ಕ್ರಿಕೆಟ್ ತಂಡದ ನಿವೃತ್ತ ಆಟಗಾರ ಹಾಗೂ ಐಸಿಸಿಯ ರೆಫ್ರಿ ಜಾವಗಲ್ ಶ್ರೀನಾಥ್ ಬಿಡುಗಡೆ ಮಾಡಿದರು.  ವಿವಿಧ ಕ್ರೀಡೆಗಳಿಗೆ ಅದರಲ್ಲೂ ವಿಶೇಷವಾಗಿ ಕ್ರಿಕೆಟ್‍ಗೆ ಈ ಹೊಸ ಸಾಧನ ಅತ್ಯುತ್ತಮವಾಗಿದೆ. ಬರುವ ದಿನಗಳಲ್ಲಿ ಇದು ಬಳಕೆಗೆ ಬರಲಿದ್ದು, ನಿಖರವಾದ ಮಾಹಿತಿಗಳನ್ನು ಕ್ರೀಡಾ ವೀಕ್ಷಕರಿಗೆ, ಅಭಿಮಾನಿಗಳಿಗೆ ನೀಡಬಹುದಾಗಿದೆ ಎಂದರು.  ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್‍ನ ಡಾಟಾ ಗ್ರೂಪ್ ಉಪಾಧ್ಯಕ್ಷ ಜೋಸೆಫ್ ಸಿರೋಶ್ ಮತ್ತಿತರರು ಜತೆಗಿದ್ದರು.

Facebook Comments

Sri Raghav

Admin