‘ಕ್ರೇಜಿಬಾಯ್’ ಕಮಾಲ್ ಶುರು

ಈ ಸುದ್ದಿಯನ್ನು ಶೇರ್ ಮಾಡಿ

Crazy-Boy

ಆಕಾಶ್, ಅರಸು, ಮೆರವಣಿಗೆಯಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಮಹೇಶ್ ಬಾಬು ಅವರು ಇದೀಗ ಹೊಸ ಪ್ರತಿಭೆಯೊಂದನ್ನು ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ. ದಿಲೀಪ್ಪ್ರಕಾಶ್ ಎಂಬ ಯುವ ಪ್ರತಿಭೆ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಆಶಿಕಾ ಎಂಬ ಬೆಡಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಈ ವಾರ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.  ಈ ಚಿತ್ರಕ್ಕೆ ಅಜಯ್ಕುಮಾರ್ ಅವರು ಕಥೆಯನ್ನು ನೀಡಿದ್ದಾರೆ. ಇದೊಂದು ಯೂತ್ ಸಬ್ಜೆಕ್ಟ್ ಆಗಿದ್ದು, ನಾಯಕ ಯಾರಿಗೂ ಡೋಂಟ್ಕೇರ್ ಎನ್ನುವಂತೆ ಮಾಸ್ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ.

ಇನ್ನು ನಾಯಕಿ ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ಅಭಿನಯಿಸಿದ್ದಾಳಂತೆ. ಯುವ ಪೀಳಿಗೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ಧಪಡಿಸಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ರ ಸಂಗೀತವಿದ್ದು, ಒಟ್ಟು ಆರು ಹಾಡುಗಳಿಗೆ ಉತ್ತಮ ರಾಗ ಸಂಯೋಜನೆ ಬಂದಿದೆಯಂತೆ. ಈಗಾಗಲೇ ಈ ಚಿತ್ರದ ಹಾಡುಗಳು ಕೇಳುಗರ ಮನಗೆದ್ದಿದ್ದು, ಟ್ರೈಲರ್ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಮುಂದಾಗಿದೆ ಎನ್ನಬಹುದು.  ಇಂತಹ ಯುವ ಪ್ರತಿಭೆಗಳ ಚಿತ್ರದಲ್ಲಿ ಹಿರಿಯ ನಟರಾದ ಅನಂತ್ನಾಗ್, ಸಾಧು ಕೋಕಿಲ, ರವಿಶಂಕರ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಕಾಣಿಸಿಕೊಳ್ಳಲಿದೆ. ಈ ಚಿತ್ರಕ್ಕೆ ಜಿ.ಚಂದ್ರು ಅವರು ಬಂಡವಾಳ ಹೂಡಿದ್ದಾರೆ. ಒಟ್ಟಾರೆ, ಬಹಳ ಅದ್ಧೂರಿಯಿಂದ ಚಿತ್ರವನ್ನು ತೆರೆ ಮೇಲೆ ತರುತ್ತಿದೆ ಚಿತ್ರತಂಡ.

► Follow us on –  Facebook / Twitter  / Google+

Facebook Comments

Sri Raghav

Admin