ಕ್ರೈಸ್ತಬಾಂಧವರಿಗೆ ಕ್ರಿಸ್ಮಸ್ ಶುಭಾಶಯ ಕೋರಿದ ಗಣ್ಯರು

ಈ ಸುದ್ದಿಯನ್ನು ಶೇರ್ ಮಾಡಿ

Chrstmas

ನವದೆಹಲಿ, ಡಿ.25-ಕ್ರಿಸ್ಮಸ್ ಪ್ರಯುಕ್ತ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ದೇಶದ ಕ್ರೈಸ್ತಬಾಂಧವರಿಗೆ ಶುಭ ಕೋರಿದ್ದಾರೆ.  ಮನುಕುಲದ ಶ್ರಯೋಭಿವೃದ್ಧಿಗೆ ಶ್ರಮಿಸುವ ದೃಢಸಂಕಲ್ಪಕ್ಕೆ ಏಸುಕ್ರಿಸ್ತರ ಬೋಧನೆಗಳು ಪ್ರೇರಣೆ ನೀಡಲಿ ಎಂದು ರಾಷ್ಟ್ರಪತಿ ಶುಭಕೋರಿದ್ದಾರೆ.  ದೇಶದ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಶುಭ ಕೋರಿರುವ ಪ್ರಧಾನಿ, ನಿಮ್ಮ ಬಯಕೆಗಳೆಲ್ಲಾ ಈಡೇರಲಿ, ಸುಖ-ಶಾಂತಿ, ಸಂಭ್ರಮ-ಸಮೃದ್ಧಿ ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

ಕ್ರೈಸ್ತ ಬಾಂಧವರಿಗೆ ನಾಡಿನ ಗಣ್ಯರ ಶುಭಾಶಯ : 

ಬೆಂಗಳೂರು, ಡಿ.25- ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಾಜ್ಯಪಾಲ ವಾಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಅನೇಕ ಗಣ್ಯರು ಕ್ರೈಸ್ತ ಬಾಂಧವರಿಗೆ ಶುಭ ಕೋರಿದ್ದಾರೆ.  ಎಲ್ಲಾ ಧರ್ಮಗಳು, ಎಲ್ಲಾ ಹಬ್ಬಗಳು ಮತ್ತು ಎಲ್ಲಾ ಆಚರಣೆಗಳು ನಮ್ಮೆಲ್ಲರನ್ನೂ ಜ್ಯಾತತೀತ ನೆಲೆಗಟ್ಟಿನಲ್ಲಿ ಒಂದುಗೂಡಿಸಲಿ. ನಾವೆಲ್ಲರೂ ವಿಶ್ವಮಾನವರಾಗಿ ಬೆಳೆದು ಬೆಳಗಲು ಸ್ಫೂರ್ತಿ ನೀಡಲಿ ಎಂದು ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.  ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರುಗಳು, ವಿವಿಧ ಪಕ್ಷಗಳ ಮುಖಂಡರು ನಾಡಿನ ಕ್ರೈಸ್ತ ಬಾಂಧವರಿಗೆ ಶುಭ ಹಾರೈಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin