ಕ್ರೋ ಮ್ಯಾನ್ ಅಕ್ಷಯ್

ಈ ಸುದ್ದಿಯನ್ನು ಶೇರ್ ಮಾಡಿ

Akshay-k

ಭಾರತದ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ 2.0 ಸಿನಿಮಾದಲ್ಲಿ ನಿಜವಾದ ನಾಯಕ್ ಅಕ್ಷಯ್ ಕುಮಾರ್ ಎಂದು ಸೂಪರ್‍ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಬಹು ನಿರೀಕ್ಷಿತ 2.0 ಸಿನಿಮಾ ಕುರಿತು ಸಂದರ್ಶನವೊಂದಲ್ಲಿ ಮಾತನಾಡಿರುವ ರಜನಿ, ಈ ಸಿನಿಮಾದಲ್ಲಿ ನಾನು ನಾಯಕನಲ್ಲ. ಅಕ್ಷಯ್ ಕುಮಾರ್ ರಿಯಲ್ ಹೀರೋ. ನನಗೆ ಅವಕಾಶ ನೀಡಿದ್ದರೆ ನಾನೇ ಆ ಪಾತ್ರ ನಿರ್ವಹಿಸುತ್ತಿದ್ದೆ. ಈ ಸಿನಿಮಾದಲ್ಲಿ ಅಕ್ಕಿಯ ಕ್ರೋ ಮ್ಯಾನ್ ಪಾತ್ರ ನೋಡಿದ ನಂತರ ಇಡೀ ದೇಶವೇ ಅವರ ಪ್ರತಿಭೆಯನ್ನು ಪ್ರಶಂಸಿಸಲಿದೆ ಎಂದಿದ್ದಾರೆ.

2.0 ಸಿನಿಮಾದಲ್ಲಿ ರಜನಿ ವೈದ್ಯ ವಿಜ್ಞಾನಿ ವಸೀಗರನ್ ಪಾತ್ರ ನಿರ್ವಹಿಸಲಿದ್ದಾರೆ. ಅಕ್ಷಯ್‍ದು ಇದರಲ್ಲಿ ವಿಜ್ಞಾನಿ ಡಾ. ರಿಚರ್ಡ್ ಪಾತ್ರ. ದೋಷಪೂರಿತ ಪ್ರಯೋಗದಿಂದ ಡಾ. ರಿಚರ್ಡ್ ಕ್ರೋ ಮ್ಯಾನ್ ಆಗಿ ಬದಲಾಗುತ್ತಾನೆ. ಅಲ್ಲಿಗೆ ಸಿನಿಮಾ ವಿಭಿನ್ನ ತಿರುವು ಪಡೆದುಕೊಳ್ಳುತ್ತದೆ. ಆರ್‍ಕೆ ಆ್ಯಕ್ಷನ್‍ನನ್ನು ಹೊಗಳಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲ.

ಏಕೆಂದರೆ 2.0 ಚಿತ್ರದಲ್ಲಿ ಅಕ್ಕಿಗೆ ರಜನಿಯಷ್ಟೇ ಸರಿ ಸಮನಾದ ಪಾತ್ರ. ಸೈನ್ಸ್-ಫಿಕ್ಷನ್ ಸಿನಿಮಾದಲ್ಲಿ ಅಕ್ಷಯ್ ಕ್ರೋ ಮ್ಯಾನ್ ರೋಲ್‍ನಲ್ಲಿ ವಿಪರೀತ ಕಾಟ ನೀಡುತ್ತಾನೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‍ಗಳಲ್ಲೂ ಸ್ಟೈಲ್‍ಕಿಂಗ್‍ಗಿಂತ ಅಕ್ಷನ್‍ಕಿಂಗ್ ಅಕ್ಷಯ್ ಗಮನಸೆಳೆಯುತ್ತಿದ್ದಾನೆ. ಆತನ ಮೇಕಪ್ ಮತ್ತು ಕಾಸ್ಟ್ಯುಮ್ ವಿಶೇಷ ಗಮನಸೆಳೆಯುತ್ತಿದೆ. ಈ ಹಿಂದೆ ಭಾರತೀಯ ಸಿನಿಮಾರಂಗದಲ್ಲಿ ಯಾರೂ ಮಾಡದ ಪಾತ್ರವನ್ನು ಅಕ್ಷಯ್ ನಿರ್ವಹಿಸುತ್ತಿರುವುದರಿಂದ ರಜನಿಯಷ್ಟೇ ಈತನ ಪಾತ್ರವೂ ಮಹತ್ವದ್ದಾಗಿದೆ. ಅಕ್ಷಯ್ ಗೆಟಪ್‍ಗೆ ಈಗಾಗಲೇ ಅಭಿಮಾನಿಗಳಿಂದ ಅಪಾರ ಪ್ರಶಂಸೆಯೂ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಪುರಸ್ಕøತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin