ಕ್ವಾಲಿಸ್ ವಾಹನದಲ್ಲಿ ಲಕ್ಷಾಂತರ ರೂ. ಬೆಲೆ ಬೆಳುವ ರಕ್ತ ಚಂದನ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Rakta-Chandana

ಸೂಲಿಬೆಲೆ, ಮೇ 13- ಹೊಸಕೋಟೆ-ಸೂಲಿಬೆಲೆ ಮಾರ್ಗದ ಲಕ್ಕೊಂಡಹಳ್ಳಿ ಬಳಿ ಕ್ವಾಲಿಸ್ ವಾಹನವೊಂದು ಶನಿವಾರ ಪತ್ತೆಯಾಗಿದ್ದು,ಇದರಲ್ಲಿ ಲಕ್ಷಾಂತರ ಬೆಲೆ ಬಾಳುವ ರಕ್ತ ಚಂದನ ತುಂಡುಗಳು ಪತ್ತೆಯಾಗಿವೆ.ಸಿಕ್ಕಿ ಬೀಳುವ ಭಯದಲ್ಲಿ ದುಷ್ಕರ್ಮಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ದೇವನಹಳ್ಳಿ ಕಡೆಯಿಂದ ಸೂಲಿಬೆಲೆ ಮಾರ್ಗವಾಗಿ ಪಶ್ಚಿಮ ಬಂಗಾಳ ನೊಂದಣೆ ಸಂಖ್ಯೆಯನ್ನು ಹೊಂದಿರುವ ಕ್ವಾಲಿಸ್ ವಾಹನವೊಂದು ಅತಿವೇಗವಾಗಿ ಹೊಸಕೋಟೆ ಹೊರಟಿದೆ.ವೇಗವಾಗಿ ಹೋಗುವಾಗ ದಾರಿಯಲ್ಲಿ ಸಿಕ್ಕ ಮತ್ತೊಂದು ವಾಹನವನ್ನು ಗುದ್ದಿರುವ ಕ್ವಾಲಿಸ್ ನಿಲ್ಲಿಸಿದೆ ಹೊಸಕೋಟೆ ಕಡೆ ಚಲಿಸಿದೆ.ವಾಹನಕ್ಕೆ ಗುದ್ದಿ ನಿಲ್ಲಿಸದೆ ಪರಾರಿಯಾಗುತ್ತಿದ್ದ ವಾಹನವನ್ನು ಹಿಂಬಾಲಿಸಿದ ನಾಲ್ಕೈದು ವಾಹನ ಸವಾರರು ಕ್ವಾಲಿಸ್ ವಾಹನವನ್ನು ಹಿಡಿಯಲು ಮುಂದಾಗಿದ್ದಾರೆ.ಇದರಿಂದ ಭಯಪಟ್ಟ ಕ್ವಾಲಿಸ್ ವಾಹನದಲ್ಲಿದ್ದ ನಾಲ್ವರು ಲಕ್ಕೊಂಡಹಳ್ಳಿ ರಸ್ತೆ ಮಾರ್ಗದಲ್ಲಿಯೇ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ.  ಹಿಂಬಾಲಿಸಿಕೊಂಡು ಬಂದ ವಾಹನ ಸವಾರರು ಇಳಿದು ಕ್ವಾಲಿಸ್ ವಾಹನವನ್ನು ಪರಿಶೀಲನೆ ಮಾಡಿದ ಅದರಲ್ಲಿ ಬೆಲೆ ಬಾಳುವ ರಕ್ತ ಚಂದನ ತುಂಡುಗಳು ಪತ್ತೆಯಾಗಿವೆ.ಕ್ವಾಲಿಸ್ ವಾಹನದ ಸೀಟಿನ ಸ್ಥಳದಲ್ಲಿ ತುಂಡುಗಳನ್ನು ತುಂಬಿಟ್ಟುದ್ದು ಪತ್ತೆಯಾಗಿದೆ.ವಿಷಯ ತಿಳಿದ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin