ಕ್ವಿಟ್ ಇಂಡಿಯಾ 75ನೆ ವರ್ಷದ ಸ್ಮರಣೆಯ ತಿರಂಗ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ct--ravi

ಚಿಕ್ಕಮಗಳೂರು, ಆ.12- ಕ್ವಿಟ್ ಇಂಡಿಯಾ ಕ್ರಾಂತಿ ಪ್ರಾಂಭವಾದ 75ನೇ ವರ್ಷದ ಅಂಗವಾಗಿ ಆ.9ರಿಂದ ತಿರಂಗ ಯಾತ್ರೆ ಪ್ರಭಾತ್ ಪೇರಿ ಪ್ರಾರಂಭ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸ್ವಾತಂತ್ರ ಹೋರಾಟದ ಸ್ಮರಣೆ ಮಾಡುವುದು, ತ್ಯಾಗ ಬಲಿದಾನದ ಪರಿಣಾಮವಾಗಿ ಸ್ವಾತಂತ್ರ್ಯ ಬಂದಿದೆ ಎಂಬುದನ್ನು ತಿಳಿಸುವುದೆ ಈ ತಿರಂಗ ಯಾತ್ರೆಯ ಉದ್ದೇಶ ಎಂದರು.
ನಿರಂತರ ಪ್ರಯತ್ನದಿಂದ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸುವ ಸಂದೇಶ ಸಾರುವುದು, ನಾವೆಲ್ಲಾ ಭಾರತೀಯರು ಎಂಬ ಒಗ್ಗಟ್ಟನಲ್ಲಿ ದೇಶ ಮುನ್ನಡೆಸ ಬಲ್ಲದು ಎಂಬುದನ್ನು ಸಾರುವ ನಿಟ್ಟಿನಲ್ಲಿ 500ಕ್ಕೂ ಹೆಚ್ಚು ಕಡೆಗಳಲ್ಲಿ ತಿರಂಗ ಯಾತ್ರೆಯ ಸಭೆಗಳನ್ನು ಆಯೋಜಿಸಲಾಗಿದೆ ಎಂದರು.ಪ್ರಧಾನಮಂತ್ರಿಗಳನ್ನೊಳಗೊಂಡಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ.18ರಂದು ರಾಜ್ಯದಲ್ಲಿ ಕೇಂದ್ರ ಸಚಿವರಾದ ಸ್ಮತಿ ಇರಾನಿ, ಡಿ.ವಿ.ಸದಾನಂದಗೌಡ, ಕೇಂದ್ರ ಗೃಹ ರಾಜ್ಯ ಸಚಿವ ಹಂಸರಾಜ್ ಗಂಗಾರಾವಲ್ ಹಗೀರ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮತ್ತಿತರರು ಭಾಗವಹಿಸಲಿದ್ದಾರೆಂದರು.
ಈಗಿರುವ ಮಾಹಿತಿ ಪ್ರಕಾರ ರಾಣಿ ಅಬ್ಬಕ್ಕನವರ ಜನ್ಮ ಸ್ಥಳವಾದ ಉಲ್ಲಾಳ, ಕಿತ್ತೂರು ರಾಣಿ ಚನ್ನಮ್ಮನವರ ಹುಟ್ಟೂರಾದ ಕಾಕತಿ, ಬಾಗಲ ಕೋಟೆಯ ಹಲಗಲಿ, ಶಿವಮೊಗ್ಗದ ಈಶೂರು ಈ ಪ್ರದೇಶಗಳಲ್ಲಿ ತಿರಂಗ ಯಾತ್ರೆ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಭಾತ್ ಪೇರಿ,ಪಂಚಿನ ಮೆರವಣಿಗೆ, ಮಾಜಿ ಸೈನಿಕರು, ಪೊಲೀಸ್  ಈಶಾನ್ಯ ರಾಜ್ಯಗಳ ಜನವಸತಿ ಪ್ರದೇಶದಲ್ಲಿ ರಕ್ಷಾ ಬಂಧನ ಕಟ್ಟುವ ಕಾರ್ಯಕ್ರಮ ನಡೆಯಲಿದ್ದು 21ರಂದು ಗಿಡ ನಡುವ ಕಾರ್ಯಕ್ರಮ ಹಾಗೂ 23ರಂದು ತಿರಂಗ ಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪಂಚ ತತ್ವಗಳನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಕೇಂದ್ರಗಳಾಗಿ ಘೋಷಿಸಿ ಅವರ ಚಿಂತನೆ, ಸ್ಫೂರ್ತಿ ಸಮಾಜಕ್ಕೆ ಸಿಗುವಂತೆ ಯೋಜನೆ ಕೈಗೊಂಡು ಬಿಜೆಪಿಯಿಂದ ಸಮಾಜದಲ್ಲಿ ಸಮಾನತೆ. ಅಸ್ಪೃಶ್ಯತೆ ತೊಡೆದು ಹಾಕಲು ಸರ್ವ ಪ್ರಯತ್ನ ಮಾಡಿದ್ದರಿಂದ ಹತಾಶರಾದ ಕೆಲವರು ಬಿಜೆಪಿ ದಲಿತ ವಿರೋಧಿ ಕೃತ್ಯದಲ್ಲಿ ತೊಡಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಷಡ್ಯಂತ್ರಗಳ ಮೂಲಕ ದಲಿತರನ್ನು ದೂರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin