ಕ್ಷಮಾದಾನ ನೀಡುವಂತೆ ಸುಪ್ರೀಂ ನ್ಯಾ.ಕರ್ಣನ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Karnan-Supreme-Court

ಚೆನ್ನೈ/ನವದೆಹಲಿ, ಮೇ 11- ನ್ಯಾಯಾಂಗ ನಿಂದನೆ ಆರೋಪದ ಮೇಲೆ ಸುಪ್ರೀಂಕೋರ್ಟ್‍ನಿಂದ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಕರ್ಣನ್ ತಮಗೆ ಕ್ಷಮಾದಾನ ನೀಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಜೈಲು ಶಿಕ್ಷೆಗೆ ಗುರಿಯಾಗಿರುವ ತಮಗೆ ಕ್ಷಮೆ ನೀಡುವಂತೆ ಅವರು ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್‍ಗೆ ಮನವಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಕರ್ಣನ್ ಅವರ ಕ್ಷಮೆ ಯಾಚನೆಯನ್ನು ಸುಪ್ರೀಂಕೋರ್ಟ್ ಪರಿಗಣಿಸಬೇಕು ಎಂದು ಅವರ ಪರ ವಕೀಲರು ಇಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.



ಕ್ಷಮೆ ಯಾಚನೆಗೆ ನ್ಯಾಯಮೂರ್ತಿಯವರು ಕೋರಿರುವುದರಿಂದ ಇದನ್ನು ಮಾನ್ಯ ಮಾಡಬೇಕು. ಕರ್ಣನ್ ಅವರು ದೇಶ ಬಿಟ್ಟು ಹೋಗಿಲ್ಲ. ಚೆನ್ನೈನಲ್ಲೇ ಇದ್ದಾರೆ ಎಂದು ವಕೀಲರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಪ್ರೀಂಕೋರ್ಟ್ ಆದೇಶದ ಮೇರೆಗೆ ಪಶ್ಚಿಮ ಬಂಗಾಳದ ವಿಶೇಷ ಪೊಲೀಸ್ ತಂಡ ನಿನ್ನೆ ಚೆನ್ನೈಗೆ ತೆರಳುವುದಕ್ಕೆ ಮುನ್ನವೇ ನ್ಯಾಯಮೂರ್ತಿ ಕರ್ಣನ್ ಗೆಸ್ಟ್‍ಹೌಸ್‍ನಿಂದ ನಾಪತ್ತೆಯಾಗಿದ್ದರು. ನ್ಯಾಯಾಂಗ ಮತ್ತು ನ್ಯಾಯಾಲಯ ನಿಂದನೆ ಆರೋಪಕ್ಕಾಗಿ ನಿನ್ನೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜೆ.ಎಸ್.ಖೇಹರ್ ನೇತೃತ್ವದ ಏಳು ನ್ಯಾಯಾಧೀಶರ ಪೀಠ ನ್ಯಾ.ಕರ್ಣನ್‍ರನ್ನು ಕೂಡಲೇ ಬಂಧಿಸಿ ಆರು ತಿಂಗಳು ಜೈಲಿನಲ್ಲಿ ಇರಿಸುವಂತೆ ಸೂಚಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin