ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಬಂಧನಕ್ಕೆ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

South-Korea

ಸಿಯೋಲ್, ಮಾ.27- ಭಾರೀ ಭ್ರಷ್ಟಾಚಾರ ಪ್ರಕರಣದಲ್ಲಿ ಪದಚ್ಯುತಿಗೊಂಡಿರುವ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾಕ್ ಗ್ಯೂನ್ ಹೈ ಅವರ ಬಂಧನಕ್ಕಾಗಿ ತನಿಖಾಧಿಕಾರಿಗಳು ಅರೆಸ್ಟ್ ವಾರೆಂಟ್‍ಗಾಗಿ ಅನುಮತಿ ಕೋರಿದ್ದಾರೆ. ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಅಧಿಕಾರ ದುರುಪಯೋಗಕ್ಕಾಗಿ ಕೊರಿಯಾ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಪದಚ್ಯುತಿಗೊಂಡಿದ್ದ ಪಾರ್ಕ್ ಅವರನ್ನು ತನಿಖಾಧಿಕಾರಿಗಳು ಇತ್ತೀಚೆಗೆ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ಭಾರೀ ಭ್ರಷ್ಟಾಚಾರಗಳಲ್ಲಿ ತೊಡಗಿದ್ದೇ ಅಲ್ಲದೆ, ಹಗರಣಗಳಲ್ಲಿ ಷಾಮೀಲಾದವರನ್ನು ರಕ್ಷಿಸಲು ನೀಲ ಭವನ (ಬ್ಲೂಹೌಸ್-ಅಧ್ಯಕ್ಷರ ಅಧಿಕೃತ ನಿವಾಸ) ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಪಾರ್ಕ್ ವಿರುದ್ಧ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.   ದುಬಾರಿ ಬೆಲೆ ವಸ್ತುಗಳನ್ನು ಲಂಚದ ರೂಪದಲ್ಲಿ ಸ್ವೀಕಾರ, ಸರ್ಕಾರಿ ಮಾಹಿತಿ ಸೋರಿಕೆ, ಅಧಿಕಾರ ದುರ್ಬಳಕೆ ಮತ್ತು ಸ್ವಜನ ಪಕ್ಷಪಾತ ಆರೋಪಗಳಿಗೆ 65 ವರ್ಷದ ಮಾಜಿ ಅಧ್ಯಕ್ಷರು ಗುರಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin