ಕ್ಷಿಪಣಿ ಪ್ರಯೋಗ ನಡೆಸಿದ ಉತ್ತರ ಕೊರಿಯಾಗೆ ವಿಶ್ವಸಂಸ್ಥೆ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Missile

ವಿಶ್ವಸಂಸ್ಥೆ, ಆ.27– ಎಚ್ಚರಿಕೆಗಳನ್ನು ಉಲ್ಲಂಘಿಸಿ ಕ್ಷಿಪಣಿ ಉಡಾವಣೆ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ ಕ್ರಮವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಗ್ರವಾಗಿ ಖಂಡಿಸಿದೆ. ಉಡಾವಣೆಗಳ ಇತ್ತೀಚಿನ ಸರಣಿಗೆ ಪ್ರತಿಯಾಗಿ ಗಂಭೀರ ಕ್ರಮಗಳನ್ನು ಕೈಗೊಳ್ಳುವುದಾಗಿ ಅದು ಎಚ್ಚರಿಕೆ ನೀಡಿದೆ.  ವಿಶ್ವಸಂಸ್ಥೆ ಸಿದ್ಧಪಡಿಸಿದ ಕರಡು ಹೇಳಿಕೆಗೆ ಉತ್ತರ ಕೊರಿಯಾದ ಪ್ರಮುಖ ಮಿತ್ರ ಪಕ್ಷವಾದ ಚೀನಾ ಕೂಡ ಬೆಂಬಲ ಸೂಚಿಸಿದೆ. ಕ್ಷಿಪಣಿಗಳನ್ನು ಆಗಾಗ ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸುವ ಪೊಯೊಂಗ್ಯಾಂಗ್ನ ಕ್ರಮಕ್ಕೆ 15 ದೇಶಗಳ ಸದಸ್ಯತ್ವ ಹೊಂದಿರುವ ಭದ್ರತಾ ಮಂಡಳಿ ಒಕ್ಕೊರಲಿನ ಖಂಡನಾರ್ಹ ನಿರ್ಣಯ ಅಂಗೀಕರಿಸಿದೆ. ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸುವುದನ್ನು ಮುಂದುವರಿಸಲು ಒಪ್ಪಿರುವ ಮಂಡಳಿ ಸದಸ್ಯರುಗಳು ಮುಂದೆ ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin