ಕ್ಷುದ್ರಗ್ರಹಗಳಿಂದ ಯಾವುದೇ ಸಮಯದಲ್ಲಿ ಭೂಮಿಗೆ ಗಂಡಾಂತರ…!

ಈ ಸುದ್ದಿಯನ್ನು ಶೇರ್ ಮಾಡಿ

asteroid

ಲಂಡನ್, ಜೂ.22-ಭೂಮಿಗೆ ಸನಿಹದಲ್ಲೇ ಇರುವ ಕ್ಷುದ್ರಗ್ರಹಗಳಿಂದ ಯಾವುದೇ ಸಮಯದಲ್ಲಿ ಗಂಡಾಂತರ ಸಂಭವಿಸಬಹುದು. ಇಂಥ ಘಟನೆಯಿಂದ ದೊಡ್ಡ ನಗರಗಳೇ ಸರ್ವನಾಶವಾಗಬಹುದು ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.   ಈವರೆಗೆ 1800 ಅಪಾಯಕಾರಿ ಆಕಾಶಕಾಯಗಳು ಸೌರಮಂಡಲದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಬಹುತೇಕ ಕ್ಷುದ್ರಗ್ರಹಗಳಾಗಿವೆ. ಇನ್ನು ಅದೆಷ್ಟೋ ಗಂಡಾಂತರಕಾರಿ ಆಸ್ಟೆರಾಯ್ಡ್ ಗಳನ್ನು ಪತ್ತೆ ಮಾಡಬೇಕಿದೆ ಎಂದು ಯುನೈಟೆಡ್ ಕಿಂಗ್‍ಡಂನ ಬೆಲ್‍ ಫಾಸ್ಟ್ ನ ಕ್ವೀನ್ಸ್ ಯೂನಿವರ್ಸಿಟಿಯ ವಿಜ್ಞಾನಿ ಅಲಾನ್ ಫಿಟ್ಸ್‍ಸೈಮೋನ್ಸ್ ಹೇಳಿದ್ದಾರೆ.

ಕ್ಷುದ್ರ ಗ್ರಹಗಳು ಮತ್ತು ಗಂಡಾಂತರಕಾರಿ ಉಲ್ಕೆಗಳು ಅಪ್ಪಳಿಸುವ ಭೀತಿ ಭೂಮಿಗೆ ತಪ್ಪಿದ್ದಲ್ಲ. ಒಂದೇ ಒಂದು ಪುಟ್ಟ ಕ್ಷುದ್ರಗ್ರಹವು ದೊಡ್ಡ ನಗರವನ್ನೇ ನಾಮಾವಶೇಷ ಮಾಡಬಲ್ಲ ಅಗಾಧ ಸಾಮಥ್ರ್ಯ ಹೊಂದಿರುತ್ತದೆ. ಅದು ಗಾತ್ರದಲ್ಲಿ ದೊಡ್ಡದಾದಷ್ಟೂ ಅನಾಹುತ ಮತ್ತಷ್ಟು ಘೋರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 30ರಂದು ವಿಶ್ವದ ವಿವಿಧೆಡೆ ಕ್ಷುದ್ರಗ್ರಹ ದಿನವನ್ನು (ಆಸ್ಟೆರಾಯ್ಡ್ ಡೇ) ಆಚರಿಸಲಾಗುತ್ತದೆ. 99 ವರ್ಷಗಳ ಹಿಂದೆ ಅಂದರೆ ಜೂನ್ 30, 1908ರಲ್ಲಿ ಸೈಬೀರಿಯಾದ ಟುಂಗುಸ್ಕಾ ಪ್ರದೇಶದ ಮೇಲೆ ಪುಟ್ಟ ಕ್ಷುದ್ರಗ್ರಹ ಬಡಿದ ಪರಿಣಾಮ ಸುಮಾರು 2,000 ಚದರ ಕಿ.ಮೀ. ಪ್ರದೇಶ ಅಲ್ಲೋಲ್ಲಕಲ್ಲೋಲವಾಗಿ ನಿರ್ನಾಮವಾಯಿತು. ಅದೃಷ್ಟವಶಾತ್ ಇದು ಮರುಭೂಮಿ ಪ್ರಾಂತ್ಯವಾದ್ದರಿಂದ ಸಾವು-ನೋವು, ಆಸ್ತಿ ನಷ್ಟ ದೊಡ್ಡ ಪ್ರಮಾಣದಲ್ಲಿ ಸಂಭವಿಸಲಿಲ್ಲ.
ಇದೇ ರೀತಿಯ ಕ್ಷುದ್ರಗ್ರಹವು ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಸಮಯದಲ್ಲಿ ಅಪ್ಪಳಿಸುವ ಸಾಧ್ಯತೆ ಇದ್ದೇ ಇದೆ. ಅದು ಯಾವುದೇ ಪ್ರಮುಖ ನಗರವನ್ನು ಸುಲಭವಾಗಿ ಆಪೋಶನ ತೆಗೆದುಕೊಳ್ಳುವ ಅಪಾಯವಿದೆ. ಅದರ ದಾಳಿಯ ಭೀಕರತೆ ಊಹೆಗೆ ನಿಲುಕದ್ದು. ಅವುಗಳು ಚಲಿಸುವ ದಿಕ್ಕನ್ನು ಊಹೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಗಂಡಾಂತರ ತಪ್ಪಿದ್ದಲ್ಲ ಎಂದು ಅಲಾನ್ ಎಚ್ಚರಿಕೆ ನೀಡಿದ್ದಾರೆ

ಕ್ಷುದ್ರ ದಿನಾಚರಣೆ ಅಂಗವಾಗಿ ಲಕ್ಸಂಬರ್ಗ್‍ನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಪೋಲೋ 9 ಖಗೋಳಯಾತ್ರಿ ರಸ್ಟಿ ಸ್ಟವೀಕ್‍ಕಾರ್ಟ್ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಬಾಹ್ಯಾಕಾಶ ವಿಜ್ಞಾನಿ ನಿಕೋಲ್ ಸ್ಟೋಟ್ ಸಾಮಾಜಿಕ ಜಾಲತಾಣದಲ್ಲಿ ಆಸಕ್ತ ಮಂದಿಯೊಂದಿಗೆ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸುವರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin