ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನ ನಡುವೆ ಶುರುವಾದ ಜಗಳ ಅಪ್ಪನ ಸಾವಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Dead-Body-Women

ದಾವಣಗೆರೆ , ಏ.20- ಕ್ಷುಲ್ಲಕ ವಿಚಾರವಾಗಿ ಅಪ್ಪ-ಮಗನ ಮಧ್ಯೆ ಜಗಳ ನಡೆದು ಅಪ್ಪನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ದೊಡ್ಡೇರಿ ಗ್ರಾಮದ ನಾಗರಾಜಪ್ಪ (50) ಸಾವನ್ನಪ್ಪಿರುವ ದುರ್ದೈವಿ. ಇಂದು ಬೆಳಗ್ಗೆ ಕ್ಷುಲ್ಲಕ ವಿಚಾರವಾಗಿ ನಾಗರಾಜಪ್ಪ ಮತ್ತು ಮಗ ಪ್ರವೀಣ್ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ನಾಗರಾಜಪ್ಪ ಪಾನಮತ್ತರಾಗಿದ್ದರು ಎನ್ನಲಾಗಿದೆ.

ಜಗಳದ ಸಂದರ್ಭದಲ್ಲಿ ಅಪ್ಪ -ಮಗನ ಮಧ್ಯೆ ತಳ್ಳಲು-ನೂಕಾಟ ನಡೆದಿದ್ದು , ತದನಂತರ ಮಗ ಪ್ರವೀಣ್ ಹೊರಗೆ ಹೋಗಿದ್ದಾನೆ. ಇದಾದ ಒಂದು ಗಂಟೆಯೊಳಗೆ ನಾರಾಯಣಪ್ಪ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೋ ಅಥವಾ ತಳ್ಳಾಟ, ನೂಕಾಟದ ವೇಳೆ ಪೆಟ್ಟಾಗಿ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯಿಂದಲೇ ವರದಿ ಬೆಳಕಿಗೆ ಬರಬೇಕಿದೆ.  ಸುದ್ದಿ ತಿಳಿ ಎಸ್ಪಿ ಚೇತನ್ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರವೀಣ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.  ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin