ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 20- ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಿಲಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ತಿಲಕನಗರದ ಬಿಟಿಬಿ ಪ್ರದೇಶದ ನಿವಾಸಿ ರಾಜಶೇಖರ್ (22) ಕೊಲೆಯಾದ ಯುವಕ.

ಬಿಟಿಬಿ ಪ್ರದೇಶದಲ್ಲಿ ಊರ ಹಬ್ಬ ನಡೆಯುತ್ತಿದ್ದು, ವಿನೋದ್ ಕರ್ ಎಂಬಾತ ಹಬ್ಬದ ಮುಂದಾಳತ್ವ ವಹಿಸಿದವನಂತೆ ಓಡಾಡುತ್ತಿದ್ದುದನ್ನು ರಾಜಶೇಖರ್ ಮತ್ತವರ ಸ್ನೇಹಿತರಾದ ಅದೇ ಏರಿಯಾದ ಕಾರ್ತಿಕ್ ಅಲಿಯಾಸ್ ಮಾರ್ಕೋನಿ (30) ಹಾಗೂ ಮಣಿಕಂಠ ಗಮನಿಸಿದ್ದಾರೆ.

ಈ ಮೂವರೂ ಮದ್ಯ ಸೇವಿಸಿ ವಿನೋದ್‍ಕರ್ ವಿರುದ್ಧ ಮಾತನಾಡಿಕೊಂಡು ರಾತ್ರಿ 12 ಗಂಟೆ ಸಮಯದಲ್ಲಿ ಕೆಎಚ್‍ಬಿ ಕ್ವಾರ್ಟಸ್‍ನಲ್ಲಿನ ಅವರ ಮನೆ ಬಳಿ ಹೋಗಿ ಬಾಗಿಲು ತಟ್ಟಿ ಅವರನ್ನು ಕರೆದುಕೊಂಡು ಹೊರಗೆ ಬಂದಿದ್ದಾರೆ. ಊರಹಬ್ಬದಲ್ಲಿ ಭಾರೀ ಓಡಾಡುತ್ತಿದ್ದೀಯಾ, ಏನು ಸಮಾಚಾರವೆಂದು ವಿಷಯ ಕೆದಕಿ ಈ ಮೂವರು ವಿನೋದ್‍ಕರ್ ಜೊತೆ ಜಗಳವಾಡಿ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ವಿನೋದ್ ಅವರ ಸಹೋದರರು ಅಲ್ಲಿಗೆ ಆಗಮಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ತಳ್ಳಾಟ- ನೂಕಾಟವಾಗಿ ವಿಕೋಪಕ್ಕೆ ತಿರುಗಿದಾಗ ಚಾಕುವಿನಿಂದ ರಾಜಶೇಖರ್ ಮತ್ತು ಕಾರ್ತಿಕ್‍ಗೆ ಇರಿಯಲಾಗಿದೆ. ಗಂಭೀರ ಗಾಯಗೊಂಡಿದ್ದ ರಾಜಶೇಖರ್ ಅವರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮುಂಜಾನೆ ಅಲ್ಲಿ ಮೃತಪಟ್ಟಿದ್ದಾರೆ.

ಇರಿತದಿಂದ ಗಾಯಗೊಂಡಿರುವ ಕಾರ್ತಿಕ್ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಜೊತೆಯಲ್ಲಿದ್ದ ಮಣಿಕಂಠ ಸ್ಥಳದಿಂದ ಓಡಿ ಹೋಗಿದ್ದಾರೆ. ರಾಜಶೇಖರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇಡಲಾಗಿದೆ. ತಿಲಕ್‍ನಗರ ಠಾಣೆ ಪೆÇಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ