ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಅ.17- ಶಾಸಕ ವೈ.ಎನ್.ರುದ್ರೇಶ್‍ಗೌಡರು ಸತತ 2ನೇ ಬಾರಿಗೆ ಶಾಸಕರಾಗಿ ತಾಲೂಕಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ಬಾರಿ ಶಾಸಕರಾಗಿದ್ದಾಗಲೂ ಸದನದಲ್ಲಿ ತಾಲೂಕಿನ ಸಮಸ್ಯೆಯನ್ನು ಮುಂದಿಟ್ಟು ಅತಿ ಹೆಚ್ಚು ಅನುದಾನ ತಂದು ಅಭಿವೃದ್ದಿ ಕಾರ್ಯಗಳನ್ನು ಮಾಡಿಸಿದ್ದಾರೆ ಎಂದು ಪುರಸಭೆ ಸದಸ್ಯ ಬಿ.ಎಲ್. ಧರ್ಮೇಗೌಡ ತಿಳಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಬ್ರೆಡ್‍ಗಳನ್ನು ವಿತರಿಸುವ ಮೂಲಕ ಶಾಸಕರು ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ ವೇಳೆ ಮಾತನಾಡಿದ ಅವರು, ಈ ಬಾರಿ ನಮ್ಮದೆ ಸರ್ಕಾರ ಇದ್ದು ರಸ್ತೆ, ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳೊಂದಿಗೆ ಕ್ಷೇತ್ರದಲ್ಲಿನ ಗ್ರಾಮೀಣ

ಪ್ರದೇಶಗಳ ಅಭಿವೃದ್ದಿಗೆ ಒತ್ತುನೀಡಿ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಭಗವಂತ ಹೆಚ್ಚಿನ ಆರೋಗ್ಯ ಆಯಸ್ಸನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.ಶಾಸಕ ವೈ.ಎನ್.ರುದ್ರೇಶ್‍ಗೌಡರ 61 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಶಾಸಕರ ಅಭಿಮಾನಿಗಳು ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ವೈದ್ಯಾಧಿಕಾರಿ ಡಾ.ನರಸೇಗೌಡ, ಕಾಂಗ್ರೆಸ್ ಮುಂಖಂಡರಾದ ತೀರ್ಥಕುಮಾರ್, ಪುರಸಭೈ ಆಶ್ರಯ ಸಮೀತಿ ಸದಸ್ಯ ಇಕ್ಬಾಲ್ ಅಹಮದ್, ಗ್ರಾಪಂ ಸದಸ್ಯ ಬಾಬು ಇನ್ನಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin