ಖಾನಾಪುರದ ಬೊಮ್ಮನಕೊಪ್ಪದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Khanapur

ಖಾನಾಪುರ,ಅ.29- ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಬೊಮ್ಮನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ. ವಾಸುದೇವ ನಿರಾಸಿ(45) ಎಂಬುವವರೇ ಮೃತಪಟ್ಟ ವ್ಯಕ್ತಿ. ಇವರ ಜಮೀನಿನಲ್ಲಿ ಕಾಡಾನೆಯೊಂದು ನುಗ್ಗಿತ್ತು. ಅದನ್ನು ಓಡಿಸಲು ಪಟಾಕಿ ಸಿಡಿಸಿದರು. ಇದರಿಂದ ಗಾಬರಿಗೊಂಡ ಆನೆಗಳು ಕಂಗಾಲಾಗಿ ಓಡಲಾರಂಭಿಸಿದವು. ಆಗ ತುಳಿತಕ್ಕೆ ಸಿಕ್ಕು ಗಂಭೀರವಾಗಿ ಗಾಯಗೊಂಡ ವಾಸುದೇವ್ ಮೃತಪಟ್ಟಿದ್ದಾರೆಂದು ಪೊಲೀಶರು ತಿಳಿಸಿದ್ದಾರೆ.

ವ್ಯಕ್ತಿಯ ಶವ ಕುಟುಂಬಕ್ಕೆ ಹಸ್ತಾಂತರ:

ಶುಕ್ರವಾರ ಖಾನಾಪುರ ತಾಲೂಕಿನ ನಾಗರಗಾಳಿ ಅರಣ್ಯ ಪ್ರದೇಶದಿಂದಾಚೆ ರೈತರ ಹೊಲಗಳಿಗೆ ನುಗ್ಗಿದ್ದ ಆನೆಗಳನ್ನು ಓಡಿಸುವ ಹಂತದಲ್ಲಿ ಈ ಘಟನೆ ಸಂಭವಿಸಿದೆ. ವ್ಯಕ್ತಿಯ ಶವಪರೀಕ್ಷೆ ಇಂದು ಖಾನಾಪುರ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರೊಂದಿಗೆ ಇಳಿಸಂಜೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿತ್ತು.

ಸ್ಥಳಕ್ಕೆ ಭೇಟಿ ಪರಿಶೀಲನೆ :

ಡಿಸಿಎಫ್ ಬಿ. ವಿ. ಪಾಟೀಲ, ಎಸಿಎಫ್ ಆರ್. ಬಿ. ಭೂತಾಳೆ, ಸಿ. ಬಿ. ಪಾಟೀಲ ಹಾಗೂ ವಲಯ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ತಡರಾತ್ರಿ ಶವ ಹುಡುಕಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಶಾಸಕ ಅರವಿಂದ ಪಾಟೀಲ ಉಪಸ್ಥಿತರಿದ್ದರು.

ಗ್ರಾಮಸ್ಥರ ಆಕ್ರೋಶ:

ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು, ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ. ಈ ಬಗ್ಗೆ ಹಲವಾರು ಬಾರಿ ಅರಣ್ಣ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿದ್ದಾರೆ. ಇದೇ ರೀತಿ ಮುಂದುವರಿದರೆ ಉಗ್ರಹೋರಾಟ ಮಾಡುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin