ಖಾರದ ಪುಡಿ ಎರಚಿ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

robbery-4

ಚನ್ನಪಟ್ಟಣ, ಮಾ.8-ಬಾಗಿಲು ತೆರೆದಿರುವ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಒಳನುಗ್ಗಿದ ಐನಾತಿ ಕಳ್ಳ ಚಿನ್ನಾಭರಣ ಬೆಳ್ಳಿ ಹಾಗೂ ನಗದು ದೋಚಿದ್ದಾಗ ಎದುರಾದ ಮನೆ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆ ಪ್ರದೇಶದಲ್ಲಿ ಹಾಡಹಗಲೇ ನಡೆದಿದೆ.
ಪ್ರಸನ್ನ ಎಂಬುವರಯ ನಗರದಲ್ಲಿ ಅನು ಹೇರ್‍ಡ್ರಸೆಸ್ ಅಂಗಡಿ ನಡೆಸುತ್ತಿದ್ದು, ನಿನ್ನೆ ಬೆಳಗ್ಗೆ 9ರ ಸಮಯದಲ್ಲಿ ಎಂದಿನಂತೆ ಅಂಗಡಿಗೆ ತೆರಳಿದ್ದರು. ಮನೆಯಲ್ಲಿದ್ದ ಪತ್ನಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಾಗಿಲು ಹಾಕದೇ ಹೊರಗೆ ಹೋದ ಸಂದರ್ಭದಲ್ಲಿ ಕಳ್ಳ ಕೈಚಳಕ ತೋರಿಸಿದ್ದಾನೆ.ಪ್ರಸನ್ನರವರ ಪತ್ನಿ ಮಕ್ಕಳನ್ನು ಶಾಲೆಗೆ ಬಿಡುವ ಅವಸರದಲ್ಲಿ ಬಾಗಿಲನ್ನು ಹಾಕದೆ ಹೋಗಿದ್ದಾರೆ. ತಕ್ಷಣ ಒಳಹೊಕ್ಕ ಕಳ್ಳ ಮನೆಯ ಬಿರುವಿನಲ್ಲಿದ್ದ ಮೂರು ಜೊತೆ ಚಿನ್ನದ ಓಲೆ, 400 ಗ್ರಾಂ ತೂಗುವ ಬೆಳ್ಳಿ ಸಾಮಾನುಗಳು ಹಾಗೂ 25 ಸಾವಿರ ನಗದನ್ನು ದೋಚಿ ಪರಾರಿಯಾಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮನೆಗೆ ವಾಪಸಾದ ಪ್ರಸನ್ನರವರ ಕಣ್ಣಿಗೆ ಖಾರದ ಪುಡಿ ಎರಚಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.ಸುಮಾರು ಒಂದೂವರೆ ಲಕ್ಷರೂ. ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳು ಸೇರಿ 25 ಸಾವಿರ ನಗದು ಕಳುವಾಗಿದೆ. ಈ ಪ್ರಕರಣದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin