‘ಖಾವಿ ಹಾಕಿಕೊಂಡು ಪೂರ್ಣಜ್ಞಾನಿ ಎಂದು ಸಂಭ್ರಮಿಸುವ ಪೇಜಾವರ ಶ್ರೀ’

ಈ ಸುದ್ದಿಯನ್ನು ಶೇರ್ ಮಾಡಿ

G-K-Govinda-Rao-02

ಬೆಂಗಳೂರು,ಡಿ.1-ಖಾವಿ ಹಾಕಿಕೊಂಡರೆ ಪೂರ್ಣಜ್ಞಾನಿ ಎಂದು ಸಂಭ್ರಮಿಸುವ ಪೇಜಾವರರು ಅಜ್ಞಾನಿ. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯನ್ನು ಸರಿಯಾಗಿ ಓದದೆ ಅವರ ಮಾತನಾಡುವುದು ತಪ್ಪು ಎಂದು ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು. ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶಕ್ಕಿರುವುದು ಒಂದೇ ಧರ್ಮ ಅದು ಪ್ರಜಾತಂತ್ರ. ದೇಶಕ್ಕಿರುವುದು ಒಂದೇ ಧರ್ಮಗ್ರಂಥ ಅದು ಸಂವಿಧಾನ ಎಂದರು.

ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಅವರ ಭಾಷಣ ರಾಜಕೀಯ ಎನ್ನುವುದಾದರೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಸಮಾವೇಶದಲ್ಲಿ ಸಂಘ ಪರಿವಾರದ ಪರವಾಗಿ ಮಾತನಾಡಿದ ನಿಮ್ಮದು ರಾಜಕೀಯ ಭಾಷಣವಲ್ಲವೇ ಎಂದು ಪ್ರಶ್ನಿಸಿದರು. ಕಾನೂನು ವಿರುದ್ಧವಾಗಿ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳುವ ಸ್ವಾಮೀಜಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಮಾವಳ್ಳಿ ಶಂಕರ್ ಮಾತನಾಡಿ, ಇತ್ತೀಚೆಗೆ ಪೇಜಾವರ ಶ್ರೀಗಳ ಪೂರ್ವ ಪಿಂಡವಾಗಿರುವ ಗೋ.ಮಧುಸೂದನ್ ಅವರ ಮಾತಿನ ಸಂವಿಧಾನ ವಿರೋಧಿ ಹೇಳಿಕೆಯ ನಂತರ ಪೇಜಾವರರ ಹೇಳಿಕೆ ಧರ್ಮ ಸಂಸದ್‍ನ ಸಮ್ಮೇಳನ ಕೋಮುವಾದಿ ಸಮ್ಮೇಳನ ಎಂದರು. ಪ್ರತಿಭಟನೆಯಲ್ಲಿ ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ, ಪ್ರಗತಿಪರ ಚಿಂತಕ ಎನ್.ವಿ.ನರಸಿಂಹಯ್ಯ, ಅನಂತನಾಯಕ್, ಮುನಿಸ್ವಾಮಿ, ಡಾ.ಎನ್.ಮೂರ್ತಿ ಮುಂತಾದವರು ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin