ಖಾಸಗಿ ಕಾಲೇಜಿಗಿಂತ ಉತ್ತಮವಾಗಿದೆ ಸರ್ಕಾರಿ ಕಾಲೇಜು

ಈ ಸುದ್ದಿಯನ್ನು ಶೇರ್ ಮಾಡಿ

kadudru-1

ಕಡೂರು, ಆ.15- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ತನ್ನದೇ ಆದ ಇತಿಹಾಸ ಹೊಂದಿದ್ದು ಯಾವುದೇ ಖಾಸಗಿ ಕಾಲೇಜುಗಳಿಗಿಂತ ಉತ್ತಮವಾಗಿದೆ ಎಂದು ಶಾಸಕ ವೈ.ಎಸ್.ವಿ.ದತ್ತಾ ತಿಳಿಸಿದರು.  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ಏರ್ಪಡಿಸಿದ್ದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಹಾಗೂ ಬಡವರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು, ಈ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಉಪನ್ಯಾಸಕರು ನಿರತರಾಗಿದ್ದಾರೆ ಎಂದರು.

ಖಾಸಗಿ ಕಾಲೇಜುಗಳು ನೀಡುವ ಶಿಕ್ಷಣಕ್ಕಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರತೀ ಭಾನುವಾರ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಕಳೆದ ಎರಡು ವರ್ಷಗಳಿಂದ ಇದಕ್ಕೆ ತಗಲುವ ವೆಚ್ಚವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸುತ್ತಿದ್ದು, ಇದಕ್ಕೆ ಹೊರಗಿನ ಶಕ್ತಿಗಳು ಅಡ್ಡಿ ಪಡಿಸಿದರೆ ಅದನ್ನು ಎದುರಿಸುವ ಶಕ್ತಿ ತಮಗೆ ಇದೆ ಎಂದು ತಿಳಿಸಿದರು.ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಕೆ,ಎಸ್.ರಮೇಶ್. ಜಿ.ಸೋಮಯ್ಯ, ಪುಟ್ಟಕರಿಯಪ್ಪ, ಕೋಡಿಹಳ್ಳಿ ಮಹೇಶ್, ಪ್ರಾಂಶುಪಾಲರಾದ ಜಯಣ್ಣ ಮತ್ತು ಉಪಪ್ರಾಂಶುಪಾಲರಾದ ಶೀಲಾ, ಕೆ.ಹೆಚ್. ಲಕ್ಕಣ್ಣ ಮತ್ತು ಪೋಷಕರು ಭಾಗವಹಿಸಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin