ಖಾಸಗಿ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಮಸೂದೆ ಕರಡು ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

Workers

ಬೆಂಗಳೂರು, ಡಿ.26-ಖಾಸಗಿ ಕೈಗಾರಿಕೆ ಗಳಲ್ಲಿ ಶೇ.70ರಷ್ಟು ಸ್ಥಳೀಯರಿಗೆ ಉದ್ಯೋ ಗಾವಕಾಶ ಕಲ್ಪಿಸುವ ಕರಡು ವಿಧೇಯಕ ಸಿದ್ಧಪಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಡು ವಿಧೇಯಕ ಕಾನೂನು ಇಲಾಖೆ ಪರಿಶೀಲನೆಯಲ್ಲಿದ್ದು, ಆ ಇಲಾಖೆ ಒಪ್ಪಿಗೆ ಪಡೆದ ನಂತರ ಸಂಪುಟ ಸಭೆ ಮುಂದೆ ಬರಲಿದೆ ಎಂದು ಹೇಳಿದರು. ಸಿ ಮತ್ತು ಡಿ ವರ್ಗದ ಶೇ.50 ಹಾಗೂ ಎ ಮತ್ತು ಬಿ ವರ್ಗದ ಶೇ.20ರಷ್ಟು ಒಟ್ಟು ಶೇ.70ರಷ್ಟು ಹುದ್ದೆಗಳನ್ನು ಕೈಗಾರಿಕೆಗಳು ಸ್ಥಳೀಯರಿಗೆ ಮೀಸಲಿರಿಸಬೇಕಾಗುತ್ತದೆ. ಈ ಉದ್ದೇಶಿತ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದ ನಂತರ ಐಟಿ-ಬಿಟಿ ಉದ್ದಿಮೆಗಳಲ್ಲಿ ಇದನ್ನು ಜಾರಿಗೆ ತರುವ ಚಿಂತನೆ ನಡೆದಿದೆ ಎಂದು ವಿವರಿಸಿದರು.

ಈ ವಿಧೇಯಕ ಕಾನೂನಾಗಿ ಜಾರಿಗೆ ಬಂದರೆ ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸುವ ಕಾನೂನಾತ್ಮಕ ರಕ್ಷಣೆ ದೊರೆಯಲಿದೆ. ಇನ್ನೆರಡು ತಿಂಗಳಲ್ಲಿ ಈ ಉದ್ದೇಶಿತ ವಿಧೇಯಕಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.  ರಾಜ್ಯದಲ್ಲಿ ಸುಮಾರು 20 ಹೊಸ ಐಟಿಐ ಸಂಸ್ಥೆಗಳಿಗೆ ಬೇಡಿಕೆ ಇದ್ದು, ಇದನ್ನು ಪರಿಶೀಲಿಸಲಾಗುತ್ತಿದೆ. ಆಯಾ ಇಲಾಖೆ ವ್ಯಾಪ್ತಿಯಲ್ಲಿಯೇ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin