ಖಾಸಗಿ ಬಸ್‍ಗಳ ಆನ್‍ಲೈನ್ ಟಿಕೆಟ್ ಬುಕಿಂಗ್ ರದ್ದು ಮಾಡಲಾಗುತ್ತಿದೆ ಎಂಬುದು ವದಂತಿಯಷ್ಟೇ

ಈ ಸುದ್ದಿಯನ್ನು ಶೇರ್ ಮಾಡಿ

Bus-Mitra--0--00

ಬೆಂಗಳೂರು,ನ.3- ಖಾಸಗಿ ಬಸ್‍ಗಳ ಆನ್‍ಲೈನ್ ಟಿಕೆಟ್ ಬುಕಿಂಗ್ ರದ್ದು ಮಾಡಲಾಗುತ್ತಿದೆ ಎಂಬುದು ವದಂತಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಸ್ಟೇಟ್‍ಗ್ಯಾರೇಜ್ ಬಳಸುವವರು ಆನ್‍ಲೈನ್ ಬುಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದೆ ಅಷ್ಟೇ. ಖಾಸಗಿ ವಾಹನಗಳ ಹಿತಾಸಕ್ತಿಯೂ ನಮಗೆ ಮುಖ್ಯ. ಹಾಗಾಂತ ಅದಕ್ಕಾಗಿ ನಮ್ಮ ಸಂಸ್ಥೆಯ ಹಿತ ಬಲಿಕೊಡುವುದಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು. ಶಾಂತಿನಗರದ ಕೆಎಸ್‍ಆರ್‍ಟಿಸಿ 4ನೇ ಘಟಕದಲ್ಲಿ ಹಮ್ಮಿಕೊಂಡಿದ್ದ ಅಪಘಾತ ಪರಿಹಾರ ನಿಧಿಯ ಬಸ್ ಮಿತ್ರ ವಾಹನಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಳೆ ಬಸ್ ದಿನಾಚರಣೆಯ ಅಂಗವಾಗಿ ಸ್ವತಃ ನಾನೇ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್‍ನಲ್ಲಿ ಪ್ರಯಾಣಿಸುತ್ತೇನೆ ಎಂದು ತಿಳಿಸಿದರು. ಕೆಎಸ್‍ಆರ್‍ಟಿಸಿ ಅಧ್ಯಕ್ಷ ಗೋಪಾಲ ಪೂಜಾರಿ, ಶಾಸಕ ಎನ್.ಎ.ಹ್ಯಾರೀಸ್, ಬಿಬಿಎಂಪಿ ಸದಸ್ಯೆ ಸೌಮ್ಯ ಶಿವಕುಮಾರ್ ಮತ್ತಿತರರು ಇದ್ದರು.

Facebook Comments

Sri Raghav

Admin