ಖಾಸಗಿ ಬಸ್ ಕಮರಿಗೆ ಬಿದ್ದು ಊಟಿ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ನಾಲ್ವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bus-Accident

ಮೈಸೂರು, ಮೇ 27-ಊಟಿಗೆ ಪ್ರವಾಸಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಖಾಸಗಿ ಬಸ್ ಕಮರಿಗೆ ಉರುಳಿಬಿದ್ದ ಪರಿಣಾಮ ಸ್ತ್ರೀಶಕ್ತಿ ಸಂಘದ ಮೂವರು ಸದಸ್ಯೆಯರು ಹಾಗೂ ಒಬ್ಬ ಅಡುಗೆಯವನು ಸ್ಥಳದಲ್ಲೇ ಮೃತಪಟ್ಟು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಸ್ತ್ರೀಶಕ್ತಿ ಸಂಘದವರು ಕಳೆದ ಎರಡು ದಿನಗಳ ಹಿಂದೆ ಖಾಸಗಿ ಬಸ್ ಮಾಡಿಕೊಂಡು ಊಟಿಗೆ ಪ್ರವಾಸಕ್ಕೆ ಹೋಗಿದ್ದರು. ಇಂದು ಬೆಳಗಿನ ಜಾವ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಊಟಿ ಸಮೀಪದ ಕೂಡ್ಲೂರಿನಲ್ಲಿ ಈ ಅವಘಡ ಸಂಭವಿಸಿದ.

ಊಟಿಯ ರಸ್ತೆಗಳು ಕಡಿದಾದ, ಸಾಕಷ್ಟು ತಿರುವುಗಳನ್ನು ಒಳಗೊಂಡಿವೆ. ಕೂಡ್ಲೂರಿನ ತಿರುವಿನಲ್ಲಿ ಚಾಲಕ ಬಸನ್ನು ತಿರುವು ಪಡೆಯುವ ವೇಳೆ ನಿಯಂತ್ರಣ ಕಳೆದುಕೊಂಡು 500 ಅಡಿ ಕಮರಿಗೆ ಉರುಳಿಬಿದ್ದಿದೆ. ಈ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, 15 ಮಂದಿ ಸದಸ್ಯರು ಗಂಭೀರವಾಗಿದ್ದು, ಇದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡಬಳ್ಳಾಪುರದ ಅಡುಗೆಯವ ಸಾವು:
ಊಟಿಗೆ ಪ್ರವಾಸಕ್ಕೆ ಹೊರಟಿದ್ದ ಸ್ತ್ರೀಶಕ್ತಿ ಸಂಘದವರು ಅಡುಗೆ ಮಾಡಲು ದೊಡ್ಡಬಳ್ಳಾಪುರ ತಾಲ್ಲೂಕಿನ ಸುತ್ತಳ್ಳಿ ತಾಂಡ್ಯದಿಂದ ಮೂವರು ಯುವಕರನ್ನು ಕರೆದೊಯ್ದಿದ್ದರು. ರವಿಕುಮಾರ್, ಭೀಮೇಶ್ ನಾಯಕ್, ರವಿ ಮೂವರು ಅಡುಗೆ ಮಾಡಲೆಂದು ತೆರಳಿದ್ದರು. ಇವರಲ್ಲಿ ರವಿಕುಮಾರ್ ಮೃತಪಟ್ಟಿದ್ದಾನೆ.ರವಿ ಮತ್ತು ಭೀಮೇಶ್‍ನಾಯಕ್‍ಗೆ ಗಾಯಳಾಗಿವೆ. ಮೃತ ರವಿಕುಮಾರ್ ಮನೆಗೆ ಆಧಾರಸ್ತಂಭವಾಗಿದ್ದ. ಆತನ ಸಾವಿನ ಸುದ್ದಿ ತಿಳಿದು ಕುಟುಂಬದವರು ದಿಕ್ಕು ತೋಚದಂತಾಗಿದ್ದಾರೆ.

Facebook Comments

Sri Raghav

Admin