ಖಾಸಗಿ ಶಾಲೆಗಳಲ್ಲಿನ ಆರ್‍ಟಿಇ ಸೀಟುಗಳು ಶ್ರೀಮಂತರ ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

RTE-01

ಬೆಂಗಳೂರು,ಜೂ.5-ರಾಜ್ಯದ ಪ್ರತಿಷ್ಟಿತ ಶಾಲೆ ಗಳಲ್ಲಿ ಆರ್‍ಟಿಇ ಕಾಯ್ದೆ ಅಡಿ ಬಡ ಮಕ್ಕಳಿಗೆ ನೀಡುವ ಸೀಟುಗಳು ಉಳ್ಳವರ ಮಕ್ಕಳಿಗೆ ಹೆಚ್ಚು ಸೀಟು ಲಭ್ಯವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆ ಗಳಲ್ಲಿ ಶೇಕಡಾ 25ರಷ್ಟು ಸೀಟುಗಳನ್ನು ತುಂಬಲು ಆದ್ಯತೆ ನೀಡುವುದಕ್ಕಿಂತ ಸರ್ಕಾರಿ ಶಾಲೆಗಳನ್ನು ಬಲಿಷ್ಠಪಡಿಸಿ ಅವುಗಳ ಗುಣಮಟ್ಟ ಹೆಚ್ಚಿಸಬೇಕು ಎಂಬ ಕೂಗು ಇದೀಗ ಕೇಳಿ ಬಂದಿದೆ.  ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸಮಿತಿ ಈ ತಿಂಗಳ ಅಂತ್ಯದ ವೇಳೆಗೆ ವರದಿ ನೀಡಲಿದ್ದು ಇದರ ಬೆನ್ನಲ್ಲೇ ಆರïಟಿಇ ಕಾಯ್ದೆ ಯಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಹಲವರು ಸಮಿತಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.ಆರ್‍ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಶೇಕಡಾ 25 ರಷ್ಟು ಸೀಟುಗಳನ್ನು ನೀಡಲು ಮೂರೂ ವರೆ ಲಕ್ಷ ರೂ ವಾರ್ಷಿಕ ಆದಾಯವನ್ನು ನಿಗದಿಪಡಿಸ ಲಾಗಿದೆ.
ಇದರಿಂದಾಗಿ ಬಿಪಿಎಲï ಕುಟುಂಬಗಳ ಬಹುತೇಕ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸೀಟುಗಳು ಲಭ್ಯವಾಗುತ್ತಿಲ್ಲ.  ಆರ್ಥಿಕ ದುರ್ಬಲರು ಎಂಬ ವ್ಯಾಖ್ಯೆಯನ್ನು ತೀರಾ ಕಡುಬಡವರು ಎಂಬರ್ಥದಲ್ಲಿ ಬಳಸುವುದು ಬೇರೆ. ಮೂರೂವರೆ ಲಕ್ಷ ರೂಗಳಷ್ಟು ಆದಾಯವನ್ನು ನಿಗದಿಪಡಿಸಿದರೆ ತಳಮಟ್ಟದ ಜನರಿಗೆ ಅವಕಾಶ ಸಿಗುವುದು ಕಷ್ಟ.

ಭಾಷಾ ಅಲ್ಪಸಂಖ್ಯಾತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಬಹುತೇಕ ಪ್ರತಿಷ್ಟಿತ ಶಾಲೆಗಳು ಆರ್‍ಟಿಇ ವ್ಯಾಪ್ತಿಯಿಂದ ಹೊರಗುಳಿದಿದ್ದು ಇದರ ಪರಿಣಾಮವಾಗಿ ಸಮಾನ ಶಿಕ್ಷಣ ನೀಡುವ ಸರ್ಕಾರದ ಚಿಂತನೆಗೆ ಹೊಡೆತ ಬಿದ್ದಿದೆ.  ಈ ಮಧ್ಯೆ ಆರ್‍ಟಿಇ ಅಡಿ ವಿದ್ಯಾರ್ಥಿಗಳಿಗೆ ನಿಗದಿತ ಶುಲ್ಕವನ್ನು ನಿಗದಿಗೊಳಿಸಿರುವ ಕ್ರಮವೇ ಅವೈಜ್ಞಾನಿಕ. ಯಾಕೆಂದರೆ ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಪ್ರದೇಶಗಳಲ್ಲಿ ಇರುವ ಶುಲ್ಕದ ಪ್ರಮಾಣಕ್ಕೂ ಪಟ್ಟಣ, ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ನಿಗದಿಯಾಗಿರುವ ಶುಲ್ಕಕ್ಕೂ ವ್ಯತ್ಯಾಸವಿದೆ.

ಆದರೆ ಆರ್‍ಟಿಇ ಅಡಿ ಒದಗಿಸುವ ಶುಲ್ಕದ ಹಣ ಕ್ಕಾಗಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಬಹುತೇಕ ಖಾಸಗಿ ಶಾಲೆಗಳು, ತಮ್ಮ ಶಾಲೆಗೆ ಮಕ್ಕಳನ್ನು ಸೇರ್ಪಡೆ ಮಾಡುವಂತೆ ಸ್ಥಳೀಯ ಶಿಕ್ಷಣಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿವೆ.  ಹೀಗೆ ಆರ್‍ಟಿಇ ಕಾಯ್ದೆ ದೊಡ್ಡ ಮಟ್ಟ ದಲ್ಲಿ ದುರುಪಯೋಗವಾಗುತ್ತಿದ್ದು ಈ ಹಿನ್ನೆಲೆ ಯಲ್ಲಿ ಮೊದಲು ಸರ್ಕಾರಿ ಶಾಲೆಗಳನ್ನು ಬಲಿಷ್ಟಪಡಿಸಬೇಕು. ಪ್ರತಿ ಒಂದು ಕಿಲೋಮೀಟರ್ ಅಂತರದಲ್ಲಿ ಸರ್ಕಾರಿ ಶಾಲೆಗಳಿರುವಂತೆ ನೋಡಿಕೊಳ್ಳಬೇಕು.

ಅದೇ ರೀತಿ ಆರ್‍ಟಿಇ ಅಡಿ ಸೀಟುಗಳನ್ನು ಭರ್ತಿ ಮಾಡಲು ಆದ್ಯತೆ ನೀಡುವುದಕ್ಕಿಂತ ಮುಖ್ಯವಾಗಿ ಸರ್ಕಾರಿ ಶಾಲೆಗಳನ್ನು ಮೊದಲು ಭರ್ತಿ ಮಾಡಿ ಆನಂತರ ಖಾಸಗಿ ಶಾಲೆಗಳನ್ನು ಸೀಟು ಪಡೆಯುವ ಕುರಿತು ಗಮನ ಹರಿಸಬೇಕು.  ನಗರ ಪ್ರದೇಶಗಳಲ್ಲಿ ಆರ್ .ಟಿ.ಇ ವ್ಯಾಪ್ತಿಯಡಿ ಸೀಟು ಪಡೆಯಲು ವಾರ್ಡ್ ವ್ಯಾಪ್ತಿಯ ಬದಲು ಪ್ರತಿ ಕಿಲೋಮೀಟರ್ ವ್ಯಾಪ್ತಿಯನ್ನು ನಿಗದಿಪಡಿಸಬೇಕು. ಅದಾಗದ ಪರಿಣಾಮವಾಗಿ ಪ್ರಭಾವಿಗಳು, ಶಕ್ತಿಯುಳ್ಳವರು ನಿರಾಯಾಸವಾಗಿ ಸೀಟು ಪಡೆದು, ಬಡವರು ಸೀಟು ಸಿಗದೆ ದೂರ ದೂರದ ಪ್ರದೇಶಗಳಿಗೆ ಹೋಗುವಂತಾಗಿದೆ.

ಹೀಗಾಗಿ ಆರ್‍ಟಿಇ ಸೀಟುಗಳನ್ನು ಭರ್ತಿ ಮಾಡಲು ಆದ್ಯತೆ ನೀಡುವುದಕ್ಕಿಂತ ಮುಖ್ಯವಾಗಿ ಅವುಗಳಿಗೆ ಶುಲ್ಕದ ರೂಪದಲ್ಲಿ ಒದಗಿಸುವ ದೊಡ್ಡ ಮೊತ್ತವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ, ಹೊಸತಾಗಿ ಕಟ್ಟುವಿಕೆಗೆ ಬಳಸಬೇಕು ಎಂಬ ಕೂಗು ಎದ್ದಿದ್ದು ಈ ಅಂಶವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸಮಿತಿಯೂ ಗಂಭೀರವಾಗಿ ಪರಿಗಣಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin