ಖಾಸಗಿ ಶಾಲೆಗಳಿಗೆ ಅನುಮತಿ ನೀಡದೆ ಸರ್ಕಾರಿ ಶಾಲೆಗೆ ಸೌಲಭ್ಯ ಒದಗಿಸಿ

ಈ ಸುದ್ದಿಯನ್ನು ಶೇರ್ ಮಾಡಿ

maluru

ಮಾಲೂರು, ಫೆ.5- ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಹೊಸ ಖಾಸಗಿ ಶಾಲೆಗಳಿಗೆ ಹೆಚ್ಚು ಅನುಮತಿ ನೀಡಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಬಿಇಒ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಏಕ ರೂಪ ಶಿಕ್ಷಣದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್‍ರವರ ಕನಸು 7ದಶಕಗಳು ಕಳೆದರು ನನಸಾಗದೆಯಿರುವುದು ವಿಪರ್ಯಾಸದ ಸಂಗತಿಯಾಗಿದೆ. ಶಿಕ್ಷಣ ಶ್ರೀಮಂತರಪಾಲಾಗಿ ಹಣ ಮಾಡುವ ದಂಧೆಯಾಗಿದೆ. ಸರ್ಕಾರದಿಂದ ಶಾಲೆಗಳಿಗೆ ಕೋಟ್ಯಾಂತರ ರೂ ಹಣ ಅಭಿವೃದ್ಧಿಗಾಗಿ ಬಿಡುಗಡೆಯಾದರೆ ಶಾಲಾ ಆಡಳಿತ ಮಂಡಳಿಯ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರ ಜೇಬು ಸೇರುತ್ತಿದೆ ಎಂದು ದೂರಿದರು.

ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ದಾಖಲಾತಿಯನ್ನು ಹೆಚ್ಚಿಸಿ, ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡದೆ ಪ್ರತಿಯೊಬ್ಬರ ಮಕ್ಕಳು ಸಹ ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುವಂತೆ ಒತ್ತಾಯ ಮಾಡಲಾಯಿತು.ರೈತ ಸಂಘದ ಎ.ನಳಿನಿ, ಮರಗಲ್ ಶ್ರೀನಿವಾಸ್, ಕಲ್ವಮಂಜಲಿ ರಾಮುಶಿವಣ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ, ಮಾ.ವೆ.ಪ್ರಕಾಶ್, ರೂಪೇಶ್, ಭವ್ಯ, ಲಕ್ಷ್ಮಿ, ಮುನಿಯಮ್ಮ, ವೆಂಕಟೇಶ್, ಪುರುಶೋತ್ತಮ್ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin