ಖುದ್ದು ಕೋರ್ಟ್‍ಗೆ ಹಾಜರಾಗಲು ಭಾಸ್ಕರ್‍ರಾವ್‍ಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Bhaskar-Roa

ಬೆಂಗಳೂರು, ಡಿ.9- ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‍ರಾವ್ ಅವರು ನ್ಯಾಯಾಲಯಕ್ಕೆ ಜ.9ರಂದು ಖುದ್ದು ಹಾಜರಾಗಬೇಕೆಂದು ಆದೇಶ ನೀಡಲಾಗಿದೆ. ಲೋಕಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾತಿ ವಿನಾಯಿತಿ ಕೋರಿ ಭಾಸ್ಕರ್‍ರಾವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ ಜ.9ರಂದು ವಿಚಾರಣೆಗೆ ಹಾಜರಾಗ ಬೇಕೆಂದು ಸೂಚಿಸಿದೆ.

ಲೋಕಾಯುಕ್ತ ಸಂಶ್ಥೆಯಲ್ಲಿ ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಭಾಸ್ಕರ್‍ರಾವ್ ಅವರ ಮೇಲೆ ಸಿಐಡಿ ಪೊಲೀಸರು ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.   ಈ ಪ್ರಕರಣದ ವಿಚಾರಣೆಯಲ್ಲಿ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕೆಂದು ಕೋರಿ ಭಾಸ್ಕರ್‍ರಾವ್ ಸಲ್ಲಿಸಿದ್ದ ಅರ್ಜಿಗೆ ಸರ್ಕಾರಿ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾಸ್ಕರ್‍ರಾವ್ ಅವರು ಕೋರ್ಟ್‍ಗೆ ಹಾಜರಾಗುತ್ತಿಲ್ಲ. ಅವರು ಖುದ್ದು ಹಾಜರಾಗಿ ವಿಚಾರಣೆ ಎದುರಿಸುವಂತೆ ನ್ಯಾಯಾಲಯ ಆದೇಶ ನೀಡಬೇಕೆಂದು ಮನವಿ ಮಾಡಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin