ಖೆಡ್ಡಾಕ್ಕೆ ಬಿದ್ದ ಕ್ರೂರ ಕಾಡಾನೆ, ನಿಟ್ಟುಸಿರು ಬಿಟ್ಟ ಸಾರ್ವಜನಿಕರ

ಈ ಸುದ್ದಿಯನ್ನು ಶೇರ್ ಮಾಡಿ

Elephant--01

ಚಿಕ್ಕಮಗಳೂರು,ಮಾ.17-ಮೂಡಿಗೆರೆ ತಾಲ್ಲೂಕಿನಾದ್ಯಂತ ಮೂರ್ನಾಲ್ಕು ವರ್ಷದಿಂದ ಒಂಟಿ ಸಲಗವೊಂದು ತೋಟದ ಬೆಳೆಗಳನ್ನು ನಾಶಪಡಿಸಿ ಜನರ ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದ ಪುಂಡಾನೆಯೊಂದನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ವರ್ಷ ಈ ಒಂಟಿ ಸಲಗ ಜನವಸತಿ ಪ್ರದೇಶಕ್ಕೆ ನುಗ್ಗಿ ಇಂದಿರಾನಗರದ ಮಂಜಯ್ಯ, ಫಲ್ಗುಣಿ ಗ್ರಾಮದ ನಾಸೀರ್ ಅವರನ್ನು ಕೊಂದುಹಾಕಿತ್ತು. ಅಲ್ಲದೆ ಹಲವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಸಾಕಷ್ಟು ವಾಹನಗಳನ್ನೂ ಜಖಂ ಮಾಡಿತ್ತು. ಇದರಿಂದಾಗಿ ಸುತ್ತಲ ಹಳ್ಳಿಯ ಗ್ರಾಮಸ್ಥರು ಹೊರಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಾಡಾನೆಯಿಂದ ದಾಳಿಗೆ ಒಳಗಾಗಿದ್ದ ಪ್ರದೇಶಗಳಗೆ ಅರಣ್ಯ ಸಚಿವ ರಮಾನಾಥ ರೈ ಕಾಡಾನೆಯನ್ನು ಹಿಡಿಸುವ ಭರವಸೆ ನೀಡಿ ವರ್ಷ ಕಳೆದರೂ ಈ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಕಳೆದ ಮೂರು ದಿನದ ಹಿಂದೆ ಆನೆ ಹಿಡಿದು ಬೇರೆಡೆ ಸಾಗಿಸಲು ಅನುಮತಿ ನೀಡಲಾಯಿತು.   ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಯ 80 ಮಂದಿ ತಂಡ ಬೈರಾಪುರ ವ್ಯಾಪ್ತಿಯ ಅರಣ್ಯದಲ್ಲಿ ಉಪಟಳ ನೀಡುತ್ತಿದ್ದ ಈ ಕಾಡಾನೆ ಇರುವ ಮಾಹಿತಿಯನ್ನು ಕಲೆ ಹಾಕಿ ಮೈಸೂರಿನಿಂದ ಕರೆಸಿಕೊಳ್ಳಲಾಗಿದ್ದ ಐದು ಸಾಕಾನೆಗಳನ್ನು ಬಳಸಿಕೊಂಡು ಪುಂಡಾನೆಯನ್ನು ಖೆಡ್ಡಾಕ್ಕೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆನೆಯನ್ನು ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರಕ್ಕೆ ರವಾನಿಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಇದರಿಂದ ಈ ಭಾಗದ ರೈತರು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.   ಸಾಕಾನೆಗಳಾದ ಅಭಿಮನ್ಯು, ಹರ್ಷ, ಭೀಮ, ಕೃಷ್ಣ , ವಿಕ್ರಮ್ ಇವುಗಳ ಜೊತೆಯಲ್ಲಿ ಮೈಸೂರಿನ ಪಶು ವೈದ್ಯರ ತಂಡ, ಹಾಸನ ವಿಭಾಗದ ಅರಣ್ಯ ವೀಕ್ಷಕ ಶಾರ್ಪ್ ಶೂಟರ್ ವೆಂಕಟೇಶ್ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Elephant  2

Facebook Comments

Sri Raghav

Admin