ಖೇರ್ 501 ಸಿನಿಮಾಗಳ ಅನುಪಮ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

Anupam-kher

ಯಾವುದೇ ಕ್ಷೇತ್ರವಿರಲಿ ನೂರರ ಸಾಧನೆ ಹೆಮ್ಮೆ ಪಡುವಂಥದ್ದು, ಈ ಅಂಕಿಗೆ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ತುಂಬಾ ಪ್ರಾಮುಖ್ಯತೆ ಇದೆ. ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್ ಈಗಾಗಲೇ 500 ಸಿನಿಮಾಗಳಲ್ಲಿ ಅಭಿನಯಿಸಿ ಜೈ ಕಾರ್ ಹಾಕಿಸಿಕೊಂಡಿದ್ದಾರೆ.  ಬಾಲಿವುಡ್ನಲ್ಲಿ ಐದು ಸೆಂಚುರಿಗಳನ್ನು ಪೂರೈಸಿರುವ ಬೊಕ್ಕ ತಲೆಯ ಈ ಪ್ರತಿಭಾವಂತ ಅಭಿನೇತ ಈಗ 501ನೆ ಚಿತ್ರದಲ್ಲಿ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಈ ಸಿನಿಮಾ ಹೆಸರು ಹೊಟೇಲ್ ಮುಂಬೈ. ಮುಂಬೈನಲ್ಲಿ 2008ರಲ್ಲಿ ನಡೆದ ಭಯೋತ್ಪಾದಕರ ದಾಳಿಗಳ ಸಂತ್ರಸ್ತರು ಮತ್ತು ಬದುಕುಳಿದವರ ವಾಸ್ತವ ಕಥೆಯನ್ನು ಈ ಸಿನಿಮಾ ಆಧರಿಸಿದೆ. ಹೊಟೇಲ್ ಮುಂಬೈ ಚಿತ್ರದ ಕೆಲವು ಭಾಗಗಳನ್ನು ಆಸ್ಟ್ರೇಲಿಯಾದ ಅಡಿಲೈಡ್ ನಗರದಲ್ಲಿ ಚಿತ್ರೀಕರಿಸಲಾಗುವುದು.

ಭಯೋತ್ಪಾದಕ ವಿರುದ್ಧ ಹೋರಾಟದಲ್ಲಿ ಎಲ್ಲಾ ಜಾತಿ-ಮತ- ಪಂಥಗಲು ಒಗ್ಗೂಡಿ ಹೋರಾಡ ಬೇಕೆಂಬ ಸಂದೇಶವನ್ನು ಈ ಸಿನಿಮಾ ಸಾರಲಿದೆ. ಜಾಸನ್ ಐಸ್ಸಾಕ್ಸ್, ಆರ್ಮಿ ಹ್ಯಾಮರ್ ಮತ್ತು ದೇವ್ ಪಟೇಲ್ ಪಾತ್ರ ವರ್ಗದಲ್ಲಿ ದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin