ಗಂಗಾನದಿ ಮಾದರಿಯಲ್ಲಿ ತುಂಗ-ಭದ್ರಾ ಸ್ವಚ್ಛತೆಗೆ ಮುಂದಾದ ಮಂತ್ರಾಲಯ ಶ್ರೀ ಮಠ

ಈ ಸುದ್ದಿಯನ್ನು ಶೇರ್ ಮಾಡಿ

Tungabhadra-a

ಮಂತ್ರಾಲಯ, ಆ.21-ಜನಪರ ಕಾಳಜಿಯ ಕಾರ್ಯಗಳಲ್ಲಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿರುವ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಈಗ ಮತ್ತೊಂದು ಮಹತ್ತರವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶಗಳಿಗೆ ನೀರುಣಿಸುವ ತುಂಗ-ಭದ್ರಾ ನದಿಯನ್ನು ಗಂಗಾನದಿ ಮಾದರಿಯಲ್ಲೇ ಸ್ವಚ್ಛಗೊಳಿಸಲು ಶ್ರೀ ಮಠ ನಿರ್ಧರಿಸಿದೆ. ತುಂಗಭದ್ರ ನದಿ ಉಗಮ ಸ್ಥಾನದಿಂದ ಆಂಧ್ರದ ಅಲಂಪುರದವರೆಗೂ ಈ ಶುದ್ಧೀಕರಣ ನಡೆಯಲಿದೆ ಎಂದು ಶ್ರೀ ಮಠದ ಆಡಳಿತಾಧಿಕಾರಿ ಸುಯಮೀಂದ್ರಾ ಚಾರ್ಯ ಅವರು ತಿಳಿಸಿದ್ದಾರೆ.   ಈಗಾಗಲೇ ಸರ್ವೆ ಕಾರ್ಯವೂ ಮುಗಿದಿದ್ದು , ಇದಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಶ್ರೀ ಗುರು ರಾಘವೇಂದ್ರರ 345ನೇ ಆರಾಧನಾ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶೀಘ್ರದಲ್ಲಿ ಸ್ವಚ್ಛತಾ ಕಾರ್ಯ ಗಂಗಾನದಿ ಸ್ವಚ್ಛತೆಯ ಮಾದರಿಯಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ವಿದೇಶದಲ್ಲಿ ಶ್ರೀ ಗುರುಗಳ ಮಠವನ್ನು ನಿರ್ಮಿಸುವ ನಿರ್ಧಾರವನ್ನು ಆಡಳಿತ ಮಂಡಳಿ ಕೈಗೊಂಡಿದೆ. ಆ ಕಾರ್ಯವು ಕೂಡ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin