ಗಂಗಾರಾಮ್ ಆಸ್ಪತ್ರೆಯಿಂದ ಸೋನಿಯಾ ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

Soniya

ನವದೆಹಲಿ, ಆ.14- ವಾರಣಾಸಿಯ ಚುನಾವಣಾ ಪ್ರಚಾರದ ವೇಳೆ ಅನಾರೊಗ್ಯಕ್ಕೆ ತುತ್ತಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಮುಂಜಾನೆ ಗಂಗಾರಾಮ್ ಆಸ್ಪತ್ರೆಯಿಂದ ಬಿಡುಗಡೆಯಾದರು.  ಈ ಕುರಿತು ಗಂಗಾರಾಮ್ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎಸ್. ದಾಸ್ ಪ್ರತಿಕ್ರಿಯಿಸಿ, ಸೊನಿಯಾ ಅವರ ಆರೊಗ್ಯ ಇದೀಗ ಸಂಪೂರ್ಣವಾಗಿ ಚೇತರಿಕೆಯಾಗಿದೆ. ಆದ್ದರಿಂದ ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.  ಕಳೆದ ಹನ್ನೆರಡು ದಿನಗಳಿಂದ 69ರ ಹರೆಯದ ಸೊನಿಯಾ ಅವರು ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದರು. ಕಳೆದ ಗುರುವಾರ ಪುನಃ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.  ಮುಂಬರುವ ಉತ್ತರ ಪ್ರದೇಶ ಚುನಾವಣೆ ನಿಮಿತ್ತ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಸೋನಿಯಾ ಅನಾರೊಗ್ಯಕ್ಕೆ ತುತ್ತಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin