ಗಂಗೂಬಾಯಿ ಹಾನಗಲ್ ವಿವಿಗೆ ನಿಯಮಾವಳಿ ಪ್ರಕಾರ ಕುಲಪತಿ ಆಯ್ಕೆ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಕುಲಪತಿಗಳ ಆಯ್ಕೆ ವಿಚಾರದಲ್ಲಿ ಸರ್ಕಾರ ನಿಯಮಾವಳಿಗಳ ಪ್ರಕಾರ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ವಿದ್ಯಾರ್ಥಿ ಹಾಗೂ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿರುವ ಈ ವಿಶ್ವವಿದ್ಯಾ ನಿಲಯಕ್ಕೆ ಕುಲಪತಿ ಆಯ್ಕೆ ವಿಚಾರ ದಲ್ಲಿ ನಡೆಯುತ್ತಿರುವ ರಾಜಕೀಯ ದಿಂದ ವಿವಿ ಸೊರಗುತ್ತಿದೆ. ಹಾಗಾಗಿ ಈ ಬಾರಿ ಉತ್ತಮ ವಿಷಯ ತಜ್ಞರನ್ನೇ, ನಿಯಮಾವಳಿಯ ಪ್ರಕಾರ ಕುಲಪತಿಯನ್ನಾಗಿ ರಾಜ್ಯಪಾಲರು ಆಯ್ಕೆ ಮಾಡಿ, ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಸಹಕರಿಸಬೇಕೆಂಬುದು ಎಲ್ಲರ ಆಶಯವಾಗಿದೆ.

ಆಯ್ಕೆ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದು, ಯುಜಿಸಿ ನಿಯಾಮವಳಿಯ ಪ್ರಕಾರ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿಹಾಗೂ ವಿಷಯದಲ್ಲಿ ಅನುಭವವನ್ನು ಹೊಂದಿರುವ ಪ್ರಾಧ್ಯಾಪಕರನ್ನು ಕುಲಪತಿಯನ್ನಾಗಿ ಮಾಡಬೇಕು.

ಆದರೆ ಈ ಹಿಂದೆ ಅನ್ಯ ಭಾಷೆಯ ಪ್ರಾಧ್ಯಾಪಕರನ್ನು ಒಳಗೊಂಡಂತೆ ಕುಲಪತಿ ಸ್ಥಾನಕ್ಕೆ ಹಲವರು ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಶಿಫಾರಸ್ಸು ಸಹ ಮಾಡಲಾಗಿತ್ತು. ಆದರೆ ನಿಯಮ ಮೀರಿ ಆಯ್ಕೆ ನಡೆದಿದೆ ಎಂಬ ಕಾರಣಕ್ಕಾಗಿಯೇ ಕುಲಪತಿಯ ಆಯ್ಕೆಯನ್ನು ರಾಜ್ಯ ಪಾಲರು ಹಿಂದಿರುಗಿಸಿದ್ದರು. ಆದರೂ ಇದೀಗ ಅಂತಹುದೇ ಪ್ರಯತ್ನಗಳು ನಡೆಯುತ್ತಿವೆ ಎಂಬ ವಿಷಯ ಮೂಲಗಳಿಂದ ತಿಳಿದುಬಂದಿದೆ.

ಈ ಸಂಬಂಧ ನಡೆದ ಉನ್ನತ ಶಿಕ್ಷಣದ ಸೆಲೆಕ್ಷನ್ ಕಮಿಟಿ ಸಭೆಯಲ್ಲಿ ಅನ್ಯಭಾಷೆಯ ವಿಷಯ ತಜ್ಞರ ಹೆಸರನ್ನೇ ಮತ್ತೆ ಪ್ರಸ್ಥಾಪಿಸಲಾಗಿದೆ ಹಾಗೆ ವಯೋಮಾನ ಮೀರಿದ ಪ್ರಧ್ಯಾಪಕರ ಹೆಸರು ಶಿಫಾರಸ್ಸು ಮಾಡಲಾಗಿದೆ. ಇಂಗ್ಲೀಷ್ ನಿವೃತ್ತಿ ಪ್ರಾಧ್ಯಾಪಕ ರಾಗಿರುವ ಕೆ.ಟಿ ಸುನೀತಾ, ನಿವೃತ್ತ ಐಎಎಸ್ ಅಧಿಕಾರಿ ಮದ್ದು ಮೋಹನ್, ಸಂಗೀತ ನಿವೃತ್ತಿ ಪ್ರಾಧ್ಯಾಪಕಿ ಬಿ.ಎಂ.ಜಯಶ್ರೀಯರ (ಎಂಪಿಎಸ್ )ಹೆಸರು ಕುಲಪತಿಯ ಸ್ಥಾನಕ್ಕೆ ಕೇಳಿಬರುತ್ತಿದೆ.

ಮೂರೂ ಅಭ್ಯರ್ಥಿಗಳಿಗೂ ಈಗಾ ಗಲೇ 63 ವರ್ಷ ಮೀರಿದೆ. ಹಾಗಾಗಿ ಯಾರೂ ಸಹ ನಾಲ್ಕುವರೆ ವರ್ಷಗಳ ಕುಲಪತಿ ಅವಧಿಯು ಪೂರ್ಣವಾಗಿಸಲು ಸಾಧ್ಯವಾಗುವುದಿಲ್ಲ. ಮೈಸೂರಿನ ಡಾ. ಹಂಗುಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯವೂ ಆರಂಭಗೊಂಡು 10 ವರ್ಷವಾದರೂ ಒಳ ರಾಜಕೀಯತೆ, ವಿಷಯ ತಜ್ಞರ ಕೊರತೆ ಯಿಂದಾಗಿ ಇನ್ನೂ ಅಭಿವೃದ್ಧಿ ಯಾಗ ಬೇಕಾದ ಕೆಲಸಗಳು ಸಾಕಷ್ಟಿದೆ. ಇನ್ನಾದರೂ ಈ ಬಗ್ಗೆ ಉತ್ತಮ ನಿರ್ಧಾರಗಳು ಕೈಗೊಳ್ಳಬೇಕಿದೆ ಎಂಬುದು ವಿದ್ಯಾರ್ಥಿಗಳ ಕೋರಿಕೆಯಾಗಿದೆ.

Facebook Comments