ಗಂಟೆ ಗಂಟೆಗೂ ಹೆಚ್ಚುತ್ತಿದೆ ಚೆನ್ನೈ ನಲ್ಲಿ ಐಟಿ ರೇಡ್ ಸಿಕ್ಕ ಅಕ್ರಮ ಸಂಪತ್ತಿನ ಮೊತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

IT-Raid-Chennai

ಚೆನ್ನೈ, ಡಿ.10-ಮಹಾನಗರದ ವಿವಿಧೆಡೆ ನಡೆದ ದಾಳಿಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ನಗದು ಮೊತ್ತ 142 ಕೋಟಿ ರೂ.ಗಳಿಗೆ ಏರಿದೆ. ಅಲ್ಲದೇ ಈವರೆಗೆ 36 ಕೋಟಿ ರೂ. ಮೌಲ್ಯ ಚಿನ್ನದ ಗಟ್ಟಿಗಳನ್ನು ಜಫ್ತಿ ಮಾಡಲಾಗಿದೆ.  ಇದು ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮೊಗೆದಷ್ಟೂ ಸಿಗುತ್ತಿದೆ. ಭಾರೀ ಪ್ರಮಾಣದ ನಗದು ಮತ್ತು ಚಿನ್ನ-ಐಟಿ ಅಧಿಕಾರಿಗಳು ಅವುಗಳನ್ನು ಎಣಿಸಿ ಎಣಿಸಿ ಸುಸ್ತಾಗುತ್ತಿದ್ದಾರೆ. ಗಂಟೆ ಗಂಟೆಗೂ ಅಕ್ರಮ ಸಂಪತ್ತಿನ ಮೊತ್ತ ಏರುತ್ತಲೇ ಇದೆ.

ಚನ್ನೈನ ಮೂವರು ಉದ್ಯಮಿಗಳ ಕಾರಸ್ಥಾನದ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಕಳೆದ 48 ಗಂಟೆಗಳಲ್ಲಿ ಪತ್ತೆಯಾಗಿರುವ ಕಾಳಧನ, ಅಕ್ರಮ ಚಿನ್ನದ ಪ್ರಮಾಣ ಕಂಡು ದೇಶವೇ ಬೆಚ್ಚಿ ಬೀಳುವಂಂತಾಗಿದೆ.  ಮೂವರು ಶಂಕಿತ ಉದ್ಯಮಿಗಳಲ್ಲಿ ಶೇಖರ್ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಗೆ ಮರಳು ಗಣಿಗಾರಿಕೆಯಲ್ಲಿ ಭಾರೀ ದೊಡ್ಡ ಉದ್ಯಮಿದೆ. ಮೂರನೇ ವ್ಯಕ್ತಿ ಪ್ರೇಮ್ ಇವರಿಬ್ಬರ ಸಂಸ್ಥೆಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ.

ಶೇಖರ್ ರೆಡ್ಡಿ ತಿರುಪತಿಯಲ್ಲಿನ ತಿರುಮಲ ದೇವಸ್ಥಾನದ ಟ್ರಸ್ಟಿಗಳಲ್ಲಿ ಒಬ್ಬ. ಇದೆ ಕಾರಣಕ್ಕಾಗಿ ಜಯಲಲಿತಾ ಸಹಿತ ತಮಿಳುನಾಡಿನ ಹಿರಿಯ ಸಚಿವರ ನಿಕಟ ಸಂಪರ್ಕ. ಜಯಾ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶೀಘ್ರ ಗುಣಮುಖವಾಗಲೆಂದು ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥಿಸಿ ಅಲ್ಲಿಂದ ಪ್ರಸಾದವನ್ನು ಅಮ್ಮನಿಗೆ ತಲುಪಿಸಿದ್ದ ಮಹಾನುಭಾವ ಈತ.
ಗಣ್ಯಾತಿಗಣ್ಯರು ತಿರುಪತಿಗೆ ಭೇಟಿ ನೀಡಿದಾಗಲೆಲ್ಲ ಅವರ ಪಕ್ಕದಲ್ಲಿ ನಿಂತು ಪೋಟೋ ತೆಗೆಸಿಕೊಳ್ಳುವ ಈತ ತನ್ನ ವರ್ಚಸ್ಸು ಮತ್ತು ಪ್ರಬಾವ ಹೆಚ್ಚಿಸಿಕೊಂಡಿದ್ದ.  ಈಗ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin