ಗಂಡನ ದುಶ್ಚಟಗಳಿಂದ ಬೇಸತ್ತು 3 ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಜಝಾರ್ (ಹರ್ಯಾಣ), ಮಾ.15-ಗಂಡನ ದುಶ್ಚಟಗಳಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ 6 ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳನ್ನು ನೀರಿನ ಟ್ಯಾಂಕ್ಗೆ ತಳ್ಳಿ ಕೊಲೆ ಮಾಡಿ ತಾನೂ ಅದರೊಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಹರ್ಯಾಣದ ಜಝಾರ್ ಜಿಲ್ಲೆಯ ಬಡನಾ ಗ್ರಾಮದಲ್ಲಿ ನಡೆದಿದೆ. ತನ್ನ ಮೂರು ಮಕ್ಕಳನ್ನು ಕೊಂದು ಸಾವಿಗೆ ಶರಣಾಗಲು ಯತ್ನಿಸಿದ ಮಹಿಳೆ ನೂತನ್ ಸ್ಥಿತಿ ಚಿಂತಾಜನಕವಾಗಿದೆ. ಈಕೆ 8 ಅಡಿ ಆಳದ ನೀರಿನ ತೊಟ್ಟಿಗೆ ತನ್ನ 3 ಮತ್ತು 5 ವರ್ಷ ಹೆಣ್ಣು ಮಕ್ಕಳು ಮತ್ತು 6 ತಿಂಗಳ ಗಂಡು ಮಗುವನ್ನು ತಳ್ಳಿ ಬಳಿಕ ತಾನೂ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಳು.
ಈಕೆ ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿ ತನ್ನ ಪತಿಯ ದುರಭ್ಯಾಸಗಳಿಂದ ನಾನು ಬೇಸತ್ತಿದ್ದೇನೆ. ಹೀಗಾಗಿ ನನ್ನ ಮತ್ತು ನನ್ನ ಮಕ್ಕಳ ಜೀವವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ತಿಳಿಸಿದ್ದಳು. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗಲೇ ಕಾಲ ಮಿಂಚಿ ಹೋಗಿತ್ತು. ಮೂರು ಮಕ್ಕಳು ಮೃತಪಟ್ಟಿದ್ದರು. ಮಹಿಳೆಯನ್ನು ರಕ್ಷಿಸಿ ರೋಹ್ಟಕ್ನ ಆಸ್ಪತ್ರೆಗೆ ಸೇರಿಸಲಾಗಿದೆ.
[ ರಾಜ್ಯ ಬಜೆಟ್ 2017-18 (Live Updates) ]
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS