ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಲಿಯಾಯ್ತು

ಈ ಸುದ್ದಿಯನ್ನು ಶೇರ್ ಮಾಡಿ

Wige-fight

ಮೈಸೂರು, ನ.22– ದಂಪತಿ ನಡುವಿನ ವೈಷಮ್ಯಕ್ಕೆ 5 ವರ್ಷದ ಮಗು ಬಲಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೂಟಗಳ್ಳಿ ಬಡಾವಣೆಯ ಹೇಮಂತ್-ಸವಿತಾ ದಂಪತಿಯ ಮಗಳು ರಿತನ್ಯ(5) ಮೃತಪಟ್ಟ ದುರ್ದೈವಿ. ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಮನಸ್ತಾಪ ಉಂಟಾಗಿದ್ದರಿಂದ ಬೇಸತ್ತ ಹೇಮಂತ್ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಮನೆ ಸಮೀಪದ ಕೈಗಾರಿಕಾ ಪ್ರದೇಶದ ಬಳಿ ಶವ ಎಸೆದು ನಾಪತ್ತೆಯಾಗಿದ್ದಾನೆ. ಈ ನಡುವೆ ನನ್ನ ಮತ್ತು ಮಗಳ ಸಾವಿಗೆ ಪತ್ನಿ ಸವಿತಾ ಕಾರಣ ಎಂದು ಬರೆದಿರುವ ಡೆತ್‍ನೋಟ್ ಸಿಕ್ಕಿದೆ.
ಸುದ್ದಿ ತಿಳಿದ ವಿಜಯನಗರ ಪೊಲೀಸರು ಸ್ಥಳಕ್ಕೆ ತೆರಳಿ ಕೈಗಾರಿಕಾ ಪ್ರದೇಶದ ಬಳಿ ಇದ್ದ ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆ ಒಳಪಡಿಸಿ, ನಾಪತ್ತೆಯಾಗಿರುವ ಹೇಮಂತ್‍ಗಾಗಿ ಹುಡುಕಾಟ ನಡೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin