ಗಡಿಭಾಗದಲ್ಲಿ ಜಾನಪದವನ್ನು ಸಶಕ್ತಗೊಳಿಸಿ : ಸಾಹಿತಿ ಸಾ.ರಘುನಾಥ್

ಈ ಸುದ್ದಿಯನ್ನು ಶೇರ್ ಮಾಡಿ

g-asdgsdg

ಕೋಲಾರ, 24-ಕನ್ನಡ ಮನಸ್ಸು ಮತ್ತು ತೆಲುಗು ದೇಹವನ್ನು ಒಳಗೊಂಡಿರುವ ಗಡಿಭಾಗದ ಜಾನಪದವನ್ನು ಸಮೀಕರಿಸುವ ಮೂಲಕ ಜನಪದವನ್ನು ಮತ್ತಷ್ಟು ಸಶಕ್ತಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಸಾಹಿತಿ ಸಾ.ರಘುನಾಥ್ ಹೇಳಿದರು.  ಕನ್ನಡ ಜಾನಪದ ಪರಿಷತ್ ನಗರದ ಜೀನಿಯಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅವಳಿ ಜಿಲ್ಲೆಗಳ ಜೀವಭಾಷೆಯಾಗಿರುವ ತೆಲುಗು ಎಂದಿಗೂ ಕನ್ನಡದ ಮೇಲೆ ಸವಾರಿ ಮಾಡಿಲ್ಲವಾದ್ದರಿಂದ ಎರಡೂ ನೆಲೆಗಟ್ಟಿನ ಜಾನಪದ ಸಂಸ್ಕೃತಿಯನ್ನು ಒಂದು ಹಂತಕ್ಕೆ ತರುವ ಜತೆಗೆ ಪರಸ್ಪರ ಭಾಷಾಂತರ ಪ್ರಕ್ರಿಯೆಗೂ ಚಾಲನೆ ನೀಡಬೇಕಾದ ಅಗತ್ಯ ಇದೆ ಎಂದರು.

ವಿದ್ಯಾರ್ಥಿಗಳು ಜಾನಪದವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕನ್ನಡೀಕರಿಸಿದರೆ ನಂತರ ವಿಶ್ವಕ್ಕೆ ಹಬ್ಬಿಸುವುದು ಕಷ್ಟವಾಗಲಾರದು ಎಂದು ನುಡಿದರು.  ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಂಚಾಲಕ ಎಂ.ಶ್ರೀನಿವಾಸಮೂರ್ತಿ ಮಾತನಾಡಿ,ಕೈಗಾರಿಕಾ ಕ್ರಾಂತಿ ಹಿನ್ನೆಲೆಯಲ್ಲಿ ಕುಲ ಕಸುಬುಗಳಿಗೆ ಹಿನ್ನೆಡೆಯಾಗಿ ಮಾನವ ಸಂಕುಲ ಪಟ್ಟಣದತ್ತ ಮುಖ ಮಾಡಿದ್ದರ ಫಲವಾಗಿ ಜಾನಪದ ಸ್ವಲ್ಪ ಮಟ್ಟಿಗೆ ನಗರೀಕರಣಗೊಂಡು ವ್ಯಾವಹಾರಿಕ ಬದುಕಿನಲ್ಲಿ ಸಂಕುಚಿತಗೊಂಡಿರುವುದರಿಂದ ಮರಳಿ ಜನಪದವನ್ನು ಕಟ್ಟಲು ಯುವಶಕ್ತಿ ಮುಂದಾಗಬೇಕೆಂದು ಕರೆ ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin