ಗಡಿಯಲ್ಲಿ ಇಂದೂ ಮುಂದುವರಿದ ಪಾಕಿಗಳ ಪುಂಡಾಟ, ನಿರಂತರ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Firing-Pakista

ಜಮ್ಮು, ಜೂ.30- ಕಳೆದ ಮೂರ್ನಾಲ್ಕು ದಿನಗಳಿಂದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ನೆಲೆಗಳತ್ತ ನಿರಂತರ ಗುಂಡು ಹಾರಿಸುತ್ತಿರುವ ಪಾಕಿಸ್ತಾನ ಸೇನೆ ಇಂದು ಕೂಡ ತನ್ನ ಪುಂಡಾಟ ಮುಂದುವರಿಸಿದ್ದು, ಗಡಿಭದ್ರತಾ ಪಡೆ ಮುಂಚೂಣಿ ನೆಲೆಗಳತ್ತ ಮೋರಾಟ್‍ಸೆಲ್‍ಗಳು ಮತ್ತು ಗುಂಡಿನ ದಾಳಿ ನಡೆಸಿವೆ. ಗಡಿ ನಿಯಂತ್ರಣ ರೇಖೆಯ ಭಿನ್‍ಭೇರ್ ಸೆಕ್ಟರ್‍ನಲ್ಲಿ ಈ ಅಪ್ರಚೋದಿತ ದಾಳಿ ನಡೆಸಿರುವ ಪಾಕಿಸ್ತಾನ ಸೈನಿಕರಿಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡಿದ್ದಾರೆ.

ಪ್ರಸ್ತುತ ಭಾರತೀಯ ಸೇನಾಪಡೆ ಯೋಧರು ಮತ್ತು ಪಾಕಿಸ್ತಾನ ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ಈ ದಾಳಿಯಲ್ಲಿ ಉಭಯ ಬಣಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin