ಗಡಿಯಲ್ಲಿ ಉದ್ವಿಗ್ನತೆ ಉಪಶಮನಕ್ಕೆ ಭಾರತ-ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

pak ind

 

ಇಸ್ಲಾಮಾಬಾದ್, ಅ.3-ಗಡಿ ನಿಯಂತ್ರಣ ರೇಖೆಯಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಉಪಶಮನಗೊಳಿಸಲು ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಮ್ಮತಿ ನೀಡಿದ್ದಾರೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಿ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪಾಕಿಸ್ತಾನದ ಸಹವರ್ತಿ ನಾಸಿರ್ ಜಾನ್‍ಜುವಾ ಈ ನಿಟ್ಟಿನಲ್ಲಿ ದೂರವಾಣಿ ಸಂಭಾಷಣೆ ನಡೆಸಿರುವ ಸಂಗತಿಯನ್ನು ಅಜೀಜ್ ಖಚಿತಪಡಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸಲು ಪರಸ್ಪರ ಸಮ್ಮತಿ ಸೂಚಿಸಲಾಗಿದೆ ಎಂಬ ಅಜೀಜ್ ಹೇಳಿಕೆಯನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. ಕಾಶ್ಮೀರದಲ್ಲಿ ಉರಿ ಸೇನೆ ನೆಲೆ ಮೇಲೆ ನಡೆದ ಪಾಕಿಸ್ತಾನ ಭಯೋತ್ಪಾದಕರು ನಡೆಸಿದ ದಾಳಿ ಹಾಗೂ ಆದಕ್ಕೆ ದಿಟ್ಟ ಪ್ರತ್ಯುತ್ತರವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ಕೈಗೊಂಡ ಕಾರ್ಯಾಚರಣೆ ನಂತರ ಉಭಯ ದೇಶಗಳ ನಡುವೆ ಬಿಕ್ಕಟ್ಟು ಬಿಗಡಾಯಿಸಿ ಗಡಿಯಲ್ಲಿ ಉದ್ವಗ್ನ ಸ್ಥಿತಿ ನೆಲೆಗೊಂಡಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin