ಗಡಿಯಲ್ಲಿ ತಲೆಯೆತ್ತಿದ 12 ಹೊಸ ಉಗ್ರರ ನೆಲೆಗಳಿಗೆ ಪಾಕ್ ಸೇನೆಯಿಂದಲೇ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

free

ನವದೆಹಲಿ, ಅ.6-ಏಷ್ಯಾ ಪ್ರಾಂತ್ಯಕ್ಕೆ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನದ ಮತ್ತೊಂದು ಭಯೋತ್ಪಾದನೆ ಕುಮ್ಮಕ್ಕು ಕೃತ್ಯ ಬಯಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಲೆ ಎತ್ತಿರುವ 12 ಹೊಸ ಉಗ್ರರ ನೆಲೆಗಳಿಗೆ ಪಾಕಿಸ್ತಾನ ಸೇನೆಯೇ ರಕ್ಷಣೆಗೆ ನಿಂತಿದೆ.  ಭಾರತೀಯ ಸೇನೆಯ ಕಮ್ಯಾಂಡೊಗಳು ಪಾಕ್ ಗಡಿ ಪ್ರದೇಶಕ್ಕೆ ನುಗ್ಗಿ ಉಗ್ರರನ್ನು ಮಟ್ಟ ಹಾಕಿದ ನಂತರ ಪಿಓಕೆಯ ಇನ್ನೊಂದು ಪ್ರದೇಶದಲ್ಲಿ ಭಯೋತ್ಪಾದಕರ ಕನಿಷ್ಠ 12 ಹೊಸ ಶಿಬಿರಗಳು ತಲೆ ಎತ್ತಿವೆ. ಜೊತೆಗೆ ಪಾಕಿಸ್ತಾನಿ ರೇಂಜರ್‍ಗಳೇ ಭಯೋತ್ಪಾದಕರು ಮತ್ತು ಉಗ್ರರ ಸಿಬಿರದ ರಕ್ಷಣೆಗೆ ಕಾವಲು ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಮಾಹಿತಿ ಲಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೂ ತಂದಿದ್ದಾರೆ. ಈ ಕುರಿತು ನಿನ್ನೆ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿದೆ.  ಪಾಕ್ ಆಕ್ರಮಿತ ಕಾಶ್ಮೀರದ ಏಳು ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಭಯೋತ್ಪಾದರನ್ನು ಹೊಸಕಿ ಹಾಕಿದ ಭಾರತದ ಕಮ್ಯಾಂಡೋಗಳು ಮತ್ತೆ ಅದೇ ರೀತಿಯ ಸೇನಾ ಕಾರ್ಯಾಚರಣೆ ನಡೆಸಲಿವೆಯೇ ಎಂಬ ಬಗ್ಗೆ ಮಾಹಿತಿ ಅತ್ಯಂತ ಗೋಪ್ಯವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin