ಗಡಿಯಲ್ಲಿ ನಿಲ್ಲದ ಪಾಕ್ ಕಿರಿಕ್ : ಮತ್ತೋರ್ವ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Firing02

ಶ್ರೀನಗರ ಅ.31 : ಜಮ್ಮು ಕಾಶ್ಮೀರದ ಪಾಕ್ ಗಡಿಯ ಪೂಂಚ್ ಹಾಗೂ ರಜೋರಿ ವಲಯದಲ್ಲಿ ಇಂದು ಮಧ್ಯಾಹ್ನ ಪಾಕ್ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಯೋಧ ಹುತಾತ್ಮನಾಗಿದ್ದಾನೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 9ಕ್ಕೆ ಪೂಂಚ್ ಜಿಲ್ಲೆಯ ಬಾಲ್ಕೋಟ್ ಮತ್ತು ಮಾನ್ಕೋಟ್ ಪ್ರದೇಶದಲ್ಲಿ ಅಪ್ರಚೋದಿತ ದಾಳಿ ನಡೆದಿದೆ. ಭಾರಿ ಪ್ರಮಾಣದ 120 ಎಂಎಂ, 83 ಎಂಎಂ ಫಿರಂಗಿಗಳು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ಬಳಸಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಕೂಡ ಪ್ರತಿ ದಾಳಿ ನಡೆಸಿದೆ.

ಉರಿ ಮೇಲೆ ಉಗ್ರರು ದಾಳಿ ಮಾಡಿದ ಬಳಿಕ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕ್ ಸೇನೆ ಗಡಿಯಲ್ಲಿ 60 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಇದರಲ್ಲಿ ಒಬ್ಬ ಪೊಲೀಸ್, ಮೂವರು ನಾಗರಿಕರು ಸೇರಿದಂತೆ ಎಂಟು ಮಂದಿ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಒಟ್ಟು 40 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin