ಗಡಿಯಲ್ಲಿ ನಿಲ್ಲದ ಪಾಕ್ ಗುಂಡಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಜಮ್ಮು ಅ. 13- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯಲ್ಲಿ ಎರಡನೆ ದಿನವಾದ ಇಂದೂ ಕೂಡ ಪಾಕಿಸ್ಥಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪಡೆಗಳ ಮುಂಚೂಣಿ ನೆಲೆಗಳ ಮೇಲೆ ಲಘು ಶಸ್ತ್ರಗಳು ಹಾಗೂ ಮಾರ್ಟರ್ ಷೆಲ್‍ಗಳಿಂದ ದಾಳಿ ನಡೆಸಿದ್ದಾರೆ.

ಇಂದು ಮುಂಜಾನೆ 7-30ರ ಸುಮಾರಿನಲ್ಲಿ ಪಾಕಿಸ್ಥಾನಿ ಸೈನಿಕರು ಇದ್ದಕ್ಕಿದ್ದಂತೆ ಕೃಷ್ಣಘಾಟಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಲ್ಲದೆ ಭಾರತೀಯ ನೆಲೆಯತ್ತ ಯದ್ವಾ ತದ್ವಾ ಗುಂಡು ಹಾರಿಸಿದರು. ಈ ದಾಳಿಯಲ್ಲಿ ಪಾಕ್ ಸೈನಿಕರು ಆಟೋಮೇಟಿಕ್ ಗನ್‍ಗಳು, ಮರ್ಟರ್ ಷೆಲ್‍ಗಳು ಮತ್ತು ಇತರ ಲಘು ಶಸ್ತ್ರಾಸ್ತ್ರಗಳನ್ನು ಬಳಸಿದರು ಎಂದು ಭಾರತೀಯ ಸೇನೆಯ ವಕ್ತರರೊಬ್ಬರು ತಿಳಿಸಿದ್ದಾರೆ. ಭಾರತೀಯ ಗಡಿ ಭದ್ರತ ಪಡೆಯ ಯೋಧರೂ (ಬಿಎಸ್‍ಎಫ್) ಕೂಡ ಪಾಕಿಸ್ಥಾನಿ ಪಡೆಗಳತ್ತ ಗುಂಡು ಹಾರಿಸಿ ದಿಟ್ಟ ಪ್ರತ್ಯುತ್ತರ ನೀಡಿದರು. ಮಧ್ಯಾಹ್ನ 12 ಗಂಟೆಯ ನಂತರವೂ ಗುಂಡಿನ ದಾಳಿ ಪ್ರತಿದಾಳಿ ಮುಂದುವರಿದಿತ್ತು.

Facebook Comments

Sri Raghav

Admin