ಗಡಿಯಲ್ಲಿ ನಿಲ್ಲದ ಪಾಕ್ ಫೈರಿಂಗ್ ; ಎಸ್‍ಐ ಹಾಗೂ ಹಲವು ಗ್ರಾಮಸ್ಥರಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Firing-in-Border

ಜಮ್ಮು, ಅ.26– ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಸೇನಾಪಡೆ ಮುಂದುವರಿಸಿರುವ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬಿಎಸ್‍ಎಫ್‍ನ ಸಬ್-ಇನ್ಸ್‍ಪೆಕ್ಟರ್ ಹಾಗೂ ಹಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ.  ಆರ್‍ಎಸ್ ಪುರ ಸೆಕ್ಟರ್‍ನಲ್ಲಿ ಇಂದು ಮುಂಜಾನೆ ಪಾಕ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆಯ ಸಬ್‍ಇನ್ಸ್‍ಪೆಕ್ಟರ್ ತೀವ್ರ ಗಾಯಗೊಂಡಿದ್ದಾರೆ.  ಇನ್ನೊಂದೆಡೆ ಜಮ್ಮು ಮತ್ತು ರಜೌರಿ ಜಿಲ್ಲೆಗಳಲ್ಲಿ ನಿರಂತರವಾಗಿ ಕದನವಿರಾಮ ಉಲ್ಲಂಘಿಸುತ್ತಿರುವ ಪಾಕಿಗಳು ನಿನ್ನೆ ರಾತ್ರಿಯಿಡೀ ನಡೆಸಿದ ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಏಳು ನಾಗರಿಕರಿಗೂ ಗಾಯಗಳಾಗಿವೆ.

ಜಮ್ಮುವಿನ ಆರ್‍ಎಸ್‍ಪುರ ಮತ್ತು ಕನ್ಹಚಾಕ್ ವಲಯಗಳಲ್ಲಿ ಪಾಕ್ ಸೇನೆ ಸಣ್ಣ ಶಸ್ತ್ರಾಸ್ತ್ರಗಳು, 80 ಎಂಎಂ ಮತ್ತು 120 ಎಂಎಂ ಮೋರ್ಟಾರ್‍ಗಳಿಂದ ಸೇನಾ ನೆಲೆ ಮತ್ತು ಗಡಿ ಗ್ರಾಮಗಳ ಮೇಲೆ ಗುಂಡಿನ ಮಳೆಗರೆದಿದೆ. ಈ ಅಪ್ರಚೋದಿತ ದಾಳಿಯಲ್ಲಿ ಇ2ಬ್ಬರು ಬಾಲಕಿಯರೂ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಪಾಕ್ ರೇಂಜರ್‍ಗಳು ಕದನವಿರಾಮ ಉಲ್ಲಂಘಿಸಿ ನಡೆಸಿದ ದಾಳಿಗೆ ಭಾರತವೂ ತಕ್ಕ ಉತ್ತರ ನೀಡಿದೆ. ರಜೌರಿ ಜಿಲ್ಲೆಯ ನೌಶೇರಾ ವಲಯದದಲ್ಲಿ ಭಾರತದ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಪಾಕಿಸ್ತಾನದ ಕನಿಷ್ಠ ಮೂವರು ಯೋಧರು ಮೃತರಾಗಿದ್ದಾರೆ.  ಭಾರತೀಯ ಕಮಾಂಡೋಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಪಾಕಿಸ್ತಾನದಿಂದ ಈವರೆಗೆ 45 ಬಾರಿ ಕದನವಿರಾಮ ಉಲ್ಲಂಘನೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin