ಗಡಿಯಲ್ಲಿ ಪಾಪಿ ಪಾಕ್ ದಾಳಿಗೆ ಮಹಿಳೆ ಬಲಿ, ಉಗ್ರರಿಂದ ಸೇನಾ ಶಿಬಿರ ಆಕ್ರಮಣ

ಈ ಸುದ್ದಿಯನ್ನು ಶೇರ್ ಮಾಡಿ

Firing-Border--01

ಕುಪ್ವಾರಾ, ಆ.12-ಅತ್ತ ಸಿಕ್ಕಿಂನ ಡೋಕ್ಲಾಮ್ ವಲಯದಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಸ್ಥಿತಿ ಆತಂಕಕಾರಿ ಮಟ್ಟ ತಲುಪಿರುವಾಗಲೇ ಇತ್ತ ಕಾಶ್ಮೀರ ಕಣಿವೆ ಗಡಿಯಲ್ಲಿ ಪಾಕಿಸ್ತಾನಿ ಸೇನಾಪಡೆಗಳ ಆಟಾಟೋಪ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಮೆಂಧಾರ್ ವಲಯದಲ್ಲಿ ಇಂದು ಮುಂಜಾನೆ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಶೆಲ್ ದಾಳಿಯಲ್ಲಿ 45 ವರ್ಷದ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆ. ಇದೇ ವೇಳೆ ಕುಪ್ವಾರದಲ್ಲಿ ಉಗ್ರರು ಸೇನಾ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿ ಕೆಲವು ಯೋಧರನ್ನು ಗಾಯಗೊಳಿಸಿದ್ದಾರೆ.

ಮೆಂಧಾರ್‍ನ ಅಪ್ಪರ್ ಗೋಲಾಟ್‍ನ ನಿವಾಸಿ ರಾಖಿಯಾ ಬೇಗಂ ಪಾಕ್ ಶೆಲ್ ದಾಳಿಗೆ ಬಲಿಯಾದ ಮಹಿಳೆ ಎಂದು ಪೊಲೀಸ್ ಅಧಿಕಾರಿ ರಿಯಾ ತಂತ್ರೆ ಹೇಳಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕಾಲಾರೂಸೆ ಅರಣ್ಯ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ಭಯೋತ್ಪಾದಕರು 42 ರಾಷ್ಟ್ರೀಯ ರೈಫಲ್ಸ್ (ಆರ್‍ಆರ್) ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿ ಕೆಲವು ಯೋಧರನ್ನು ಗಾಯಗೊಳಿಸಿದ್ದಾರೆ. ಗಾಯಾಳುಗಳನ್ನು ದ್ರುಗ್‍ಮುಲಿಯಾದ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದೆ. ಉಗ್ರರಿಗಾಗಿ ಆ ಪ್ರದೇಶದಲ್ಲಿ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin