ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ನಿಯೋಜಿಸುವ ಭಾರತದ ಕ್ರಮಕ್ಕೆ ಚೀನಾ ತಗಾದೆ

ಈ ಸುದ್ದಿಯನ್ನು ಶೇರ್ ಮಾಡಿ

Brahmos

ನವದೆಹಲಿ, ಆ.23-ಈಶಾನ್ಯ ಭಾರತದ ಗಡಿಯಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ನಿಯೋಜಿಸುವ ಭಾರತದ ಕ್ರಮಕ್ಕೆ ಚೀನಾ ತಗಾದೆ ತೆಗೆದಿದೆ. ಇದರಿಂದ ಗಡಿ ಪ್ರದೇಶದಲ್ಲಿ ಸ್ಥಿರತೆ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.  ಈಶಾನ್ಯ ಭಾರತದ ಸಪ್ತ ಸೋದರಿ ರಾಜ್ಯಗಳಲ್ಲಿ ಒಂದಾದ ಅರುಣಾಚಲ ಪ್ರದೇಶ ಗಡಿಯಲ್ಲಿ ಸುಧಾರಿತ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಭದ್ರತೆ ಕುರಿತ ಸಂಪುಟ ಸಮಿತಿ ಈ ತಿಂಗಳ ಆರಂಭದಲ್ಲಿ ನಿರ್ಧರಿಸಿತ್ತು. ಆದರೆ, ಕ್ಷಿಪಣಿ ನಿಯೋಜನೆಗೆ ಮುನ್ನವೇ ಚೀನಾ ಕ್ಯಾತೆ ತೆಗೆದಿದೆ.

ಪರ್ವತ ಪ್ರದೇಶದಲ್ಲಿ ಯುದ್ಧಕ್ಕಾಗಿ 4,300 ಕೋಟಿ ರೂ.ಗಳ ವೆಚ್ಚದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ನನ್ನು ಭಾರತ ಅಭಿವೃದ್ಧಿಗೊಳಿಸಿದೆ.  ಗಡಿ ಪ್ರದೇಶದಲ್ಲಿ ಕ್ಷಿಪಣಿ ನಿಯೋಜಿಸಿರುವುದರಿಂದ ಚೀನಾದಿಂದ ಪ್ರತಿ-ಕ್ರಮಗಳಿಗೆ ಎಡೆ ಮಾಡಿಕೊಡುತ್ತದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ ಪಿಎಲ್ಎ ಡೈಲಿಯ ಅಧಿಕೃತ ಪ್ರಕಟಣೆ ತಿಳಿಸಿದೆ ಎಂದು ಭಾರತದ ಮಾಧ್ಯಮ ವರದಿ ಮಾಡಿದೆ. ಚೀನಾದ ಟಿಬೆಟ್ ಮತ್ತು ಯುನಾನ್ ಪ್ರಾಂತ್ಯಗಳಲ್ಲಿ ಎದುರಾಗುವ ಗಂಭೀರ ಸವಾಲುಗಳನ್ನು ಎದುರಿಸಲು ಮತ್ತು ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುವ ಭಾರತದ ನಿರ್ಧಾರಕ್ಕೆ ಚೀನಾ ತಗಾದೆಯಿಂದ ಹಿನ್ನಡೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin