ಗಡಿಯಲ್ಲಿ ಮತ್ತೆ ತಲೆ ಎತ್ತಿದ ಭಯೋತ್ಪಾದಕರ ಕಾರ್ಖಾನೆ, ಕಾಶ್ಮೀರದಲ್ಲಿ ಮಾನವ ಬಾಂಬ್ ದಾಳಿಯ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Terrorist-Kashmirನವದೆಹಲಿ/ಜಮ್ಮು, ಮೇ 3-ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಚು ರೂಪಿಸಲಾಗುತ್ತಿರುವ ಕೇಂದ್ರ ಕಾರಸ್ಥಾನವಾದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದಕರ ಹೊಸ ತರಬೇತಿ ಶಿಬಿರಗಳು ಮತ್ತು ಆಕ್ರಮಣ ತಾಣಗಳು (ಲಾಂಚ್ ಪ್ಯಾಡ್‍ಗಳು) ತಲೆ ಎತ್ತಿವೆ.   ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಪೈಶಾಚಿಕ ಕೃತ್ಯದ ಬೆನ್ನಲ್ಲೇ, ಪಾಕ್‍ನ ಆತ್ಮಾಹುತಿ ಬಾಂಬರ್‍ಗಳು ಕಾಶ್ಮೀರದೊಳಗೆ ನುಸುಳಲು ಸನ್ನದ್ಧರಾಗಿದ್ದು, ಕಣಿವೆಯಲ್ಲಿ ಮತ್ತಷ್ಟು ಫಿದಾಯೀನ್ (ಮಾನವ ಬಾಂಬ್) ಆಕ್ರಮಣಗಳನ್ನು ನಡೆಸಿ ಶಾಂತಿ ಕದಡಲಿದ್ದಾರೆ ಎಂದು ಗುಪ್ತಚರ ದಳ ಇದೇ ವೇಳೆ ಎಚ್ಚರಿಕೆ ನೀಡಿದೆ.ಕಳೆದ ಕೆಲವು ತಿಂಗಳಿನಿಂದ ಎಲ್‍ಒಸಿ ಸನಿಹದಲ್ಲಿ ಟೆರ್ರರ್ ಟ್ರೈನಿಂಗ್ ಕ್ಯಾಂಪ್‍ಗಳು ಮತ್ತು ಲಾಂಚ್ ಪ್ಯಾಡ್‍ಗಳ ಸ್ಥಾಪನೆ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಭಾರತೀಯ ಸೇನೆ ಕೈಗೊಂಡ ಸರ್ಜಿಕಲ್ ದಾಳಿ ವೇಳೆ ಹೆದರಿ ಸ್ಥಳಾಂತರಗೊಂಡಿದ್ದ ಭಯೋತ್ಪಾದಕರ ನೆಲೆಗಳು ಮತೆ ನಾಯಿಕೊಡೆಗಳಂತೆ ಚಿಗುರುತ್ತಿವೆ.   ಪಿಒಕೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ವಿವಿಧ ಭಯೋತ್ಪಾದನೆ ಸಂಘಟನೆಗಳ 55 ಶಿಬಿರಗಳು ಈಗ ಸಕ್ರಿಯವಾಗಿವೆ. ಸರ್ಜಿಕಲ್ ದಾಳಿ ನಂತರ ವೇಳೆ ಸ್ಥಳಾಂತರಗೊಂಡಿದ್ದ 35 ಶಿಬಿರಗಳೂ ಕ್ಯಾಂಪ್‍ಗಳು ಇದರಲ್ಲಿ ಸೇರಿವೆ. ಇವುಗಳೊಂದಿಗೆ 20 ಹೊಸ ಶಿಬಿರಗಳು ತಲೆ ಎತ್ತಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಇದೇ ವೇಳೆ 160 ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ. ಭಾರತದ ಭದ್ರತಾ ಪಡೆಗಳ ಮೇಲೆ ದಾಳಿಗಳನ್ನು ತೀವ್ರಗೊಳಿಸುವಂತೆ ಪಾಕಿಸ್ತಾನ ಸೇನೆಯೇ ಸೂಚನೆ ನೀಡಿದೆ ಎಂದು ಬೇಹುಗಾರಿಕೆ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದು ತಿಳಿಸಿದೆ.   ಕಳೆದ ಕೆಲವು ತಿಂಗಳಿನಿಂದ ಕಾಶ್ಮೀರದಲ್ಲಿ ಉಗ್ರಗಾಮಿ ಸಂಘಟನೆಗಳು ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ಸಮಾಜಘಾತುಕ ಕೃತ್ಯಗಳಲ್ಲಿ ಸಾಥ್ ನೀಡಲು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.   ಭದ್ರತಾ ಪಡೆಗಳ ಮೇಲೆ ಅಗಾಗ ದಾಳಿ ನಡೆಸಿ ಯೋಧರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಭಯೋತ್ಪಾದನೆ ಸಂಘಟನೆಗಳ ಉದ್ದೇಶವಾಗಿದೆ.

ಆತ್ಮಾಹುತಿ ದಾಳಿಗೆ ಸಜ್ಜು :

ಪಾಕ್‍ನ ಆತ್ಮಾಹುತಿ ಬಾಂಬರ್‍ಗಳು ಕಾಶ್ಮೀರದೊಳಗೆ ನುಸುಳಲು ಸಜ್ಜಾಗುತ್ತಿದ್ದಾರೆ. ಕಣಿವೆಯಲ್ಲಿ ಮತ್ತಷ್ಟು ಆತ್ಮಾಹತ್ಯಾ ಆಕ್ರಮಣಗಳನ್ನು ನಡೆಸಿ ಸಾಮಾಜಿಕ ಶಾಂತಿಗೆ ಭಂಗ ಉಂಟು ಮಾಡಲಿದ್ದಾರೆ ಎಂದು ಗುಪ್ತಚರ ದಳ ಇದೇ ವೇಳೆ ಎಚ್ಚರಿಕೆ ನೀಡಿದೆ. ಕಾಶ್ಮೀರದಲ್ಲಿ ಈಗಾಗಲೇ ಅಶಾಂತಿ ಮತ್ತು ಪ್ರಕ್ಷುಬ್ಧ ವಾತಾವರಣವಿದ್ದು, ಕಳೆದ ಕೆಲವು ತಿಂಗಳಿನಿಂದ ಕಲ್ಲು ತೂರಾಟ ಮತ್ತು ಉಗ್ರ ಕೃತ್ಯಗಳ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗಿವೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರು ಠಿಕಾಣಿ ಹೂಡಿದ್ದು, ಸಂದರ್ಭ ನೋಡಿ ಕಾಶ್ಮೀರದೊಳಗೆ ನುಸುಳಲಿದ್ದಾರೆ. ಇದಕ್ಕೆ ಪಾಕ್ ಸೇನೆ ಬೆಂಬಲ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರದಿಂದ ಇರಬೇಕೆಂದು ಸೂಚನೆ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin