ಗಡಿಯೊಳಗೆ ನುಸುಳಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದ ಬಿಎಸ್‍ಎಫ್ ಯೋಧರು

ಈ ಸುದ್ದಿಯನ್ನು ಶೇರ್ ಮಾಡಿ

Border--01

ಜಮ್ಮು, ಫೆ.26-ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿ(ಐಬಿ) ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಮೂಲದ ಭಯೋತ್ಪಾದಕರನ್ನು ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರು ಹಿಮ್ಮೆಟ್ಟಿಸಿದ್ದಾರೆ. ರಾಮ್‍ಗಢ್ ವಲಯದ ಐಬಿಯಲ್ಲಿ ಇಂದು ಮುಂಜಾನೆ 5ರ ಸುಮಾರಿನಲ್ಲಿ ಕೆಲವು ಶಂಕಾಸ್ಪದ ಚಲನೆಗಳನ್ನು ಬಿಎಸ್‍ಎಫ್ ಯೋಧರು ಗಮನಿಸಿದರು. ಉಗ್ರರು ಒಳ ನುಸುಳಲು ಯತ್ನಿಸುತ್ತಿದ್ದಂತೆ ಯೋಧರು ಹಲವಾರು ಸುತ್ತು ಗುಂಡಿನ ದಾಳಿ ಮತ್ತು ಬೆಳಕು ಚಿಮ್ಮಿಸುವ ಇಲ್ಯೂಮಿನೇಷನ್ ಫ್ಲೇರ್‍ಗಳನ್ನು ಪ್ರಯೋಗಿಸಿದರು. ಇದರಿಂದ ಹೆದರಿದ ಭಯೋತ್ಪಾದಕರು ಪರಾರಿಯಾದರು ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin