ಗಡಿ ಉಲ್ಲಂಘಿಸಿ ಪುಂಡಾಟ ಮಾಡುತ್ತಿರುವ ಪಾಕ್‍ಗೆ ಗಂಭೀರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Border--001

ನವದೆಹಲಿ,ಜು.17-ಗಡಿ ನಿಯಂತ್ರಣ ರೇಖೆ ಬಳಿ ಯುದ್ಧ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದರೆ ಪ್ರತಿ ದಾಳಿ ಮಾಡುವ ಅಧಿಕಾರವನ್ನು ತಾನು ಹೊಂದಿರುವುದಾಗಿ ಭಾರತ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದೆ. ಎಲ್‍ಒಸಿ ಬಳಿ ಉದ್ಭವಿಸಿರುವ ಪ್ರಕ್ಷುಬ್ದ ಪರಿಸ್ಥಿತಿ ಮತ್ತು ಕದನ ವಿರಾಮ ಉಲ್ಲಂಘನೆ ಕುರಿತು ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ(ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್ ಇಂದು ಪಾಕಿಸ್ತಾನದ ತಮ್ಮ ಸಹವರ್ತಿಯೊಂದಿಗೆ ದೂರವಾಣಿ ಮುಖೇನ ಈ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಪಾಕಿಸ್ತಾನದ ಯುದ್ಧ ವಿರಾಮ ಮತ್ತು ಅಪ್ರಚೋದಿತ ದಾಳಿಯಿಂದ ಉಂಟಾಗಿರುವ ಬಿಗ್ಗಟ್ಟಿನ ಬಗ್ಗೆಯೂ ಅವರು ಪಾಕಿಸ್ತಾನದ ಡಿಜಿಎಂಒ ಅವರ ಗಮನಕ್ಕೆ ತಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin